This is the title of the web page
This is the title of the web page
State NewsVideo News

ಹಿಂದು ವಿರೋಧಿಗಳು ಎಂಬ ಭಾವನೆ ಸಹಜವಾಗಿ ತಲೆದೋರುತ್ತದೆ..


K2kannadanews.in

ರಾಯಚೂರು : ಸಾರ್ವತ್ರಿಕ ರಜೆ (General holiday) ನೀಡದಿದ್ದರೆ ಹಿಂದೂ ವಿರೋಧಿಗಳು (anti-Hindu) ಎಂಬ ಭಾವನೆ (Feeling) ಸಹಜವಾಗಿ ತಲೆದೋರುತ್ತದೆ ಅದಕ್ಕೆ ಮುಖ್ಯಮಂತ್ರಿಗಳು (CM) ಆಸ್ಪದ ನೀಡಬಾರದು ಎಂದು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಹೇಳಿದರು.

ರಾಯಚೂರಿನಲ್ಲಿ (Raichur) ಬಾಳೆಹೊನ್ನೂರು ರಂಭಾಪುರಿ (Rambhapuri) ಪೀಠದ ಜಗದ್ಗುರುಗಳು ಮಾಧ್ಯಮದೊಂದಿಗೆ ಮಾತನಾಡುತ್ತಾ. ನಾಳೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ (Ayodhya rammandira) ಉದ್ಘಾಟನೆ ಆಗುತ್ತಿದ್ದು ರಾಮನ ಮೂರ್ತಿ (Rama lalla) ಪುನರ್ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ (many stats) ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ನಾಳೆ ರಾಜ್ಯದಲ್ಲಿ ಸಾರ್ವಜನಿಕ ರಜೆ ನೀಡಬೇಕು ಎನ್ನುವುದು ಜನರ ಅಪೇಕ್ಷೆಯಾಗಿದೆ. ಆದರೆ ಕೆಲವು ಪಕ್ಷದ ಧ್ಯೇಯ ಧೋರಣೆಗಳು (Mission attitudes), ಆಯಾ ಪಕ್ಷದ ನಾಯಕರ/(Party ledars) ಗುರಿಗಳು ಭಿನ್ನವಾಗಿರುವ ಕಾರಣ ರಜೆ ಕೊಟ್ಟಿರಲಿಕ್ಕಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇನ್ನು ಸಮಯ ಇದೆ ಸಂಜೆ ವೇಳೆಗೆ ತಮ್ಮ ತೀರ್ಮಾನ ಪ್ರಕಟಿಸಬಹುದು.

ರಾಜ್ಯದಲ್ಲಿ ರಜೆ ಘೋಷಿಸಿದರೇ ಪಕ್ಷಕ್ಕೆ, ನಾಯಕರ ಮೇಲೆ ಹೆಚ್ಚಿನ ಭಾವನೆ, ಒಳ್ಳೆಯ ರೀತಿ ತಿಳಿದುಕೊಳ್ಳುತ್ತಾರೆ. ಇಲ್ಲದಿದ್ದರೆ ಹಿಂದುಗಳ ವಿರೋಧಿ ಎಂಬ ಭಾವನೆ ಸಹಜವಾಗಿ ತಲೆದೋರುತ್ತದೆ. ಅದಕ್ಕೆ ಮುಖ್ಯಮಂತ್ರಿಗಳು, ಪಕ್ಷದ ನಾಯಕರು ಆಸ್ಪದ ಕೊಡಬಾರದು ಎಂದರು.


[ays_poll id=3]