This is the title of the web page
This is the title of the web page
Crime NewsState News

Farmer Murder : ಮಲಗಿದ್ದವನ ರುಂಡವನ್ನೇ ಕತ್ತರಿಸಿದ ..!


K2kannadanews.in

ಕ್ರೈಂ ನ್ಯೂಸ್ : ಮೆಣಸಿನಕಾಯಿ(Chilly) ಜಮೀನಿನಲ್ಲಿ ಕಾವಲು(guard) ಕಾಯುತ್ತಿದ್ದ ರೈತನನ್ನು(Farmer) ಭೀಕರವಾಗಿ ಹತ್ಯೆ (Murder case) ಮಾಡಲಾಗಿದೆ. ಜಮೀನಲ್ಲಿ ಮಲಗಿದ್ದ ವ್ಯಕ್ತಿಯ ರುಂಡವನ್ನೇ ದುರುಳರು ಕತ್ತರಿಸಿದ ಘಟನೆ ಮಾಳೆಕೊಪ್ಪ ಗ್ರಾಮದಲ್ಲಿ ನಡೆದಿದೆ.

ಗದಗ(gadaga) ತಾಲೂಕಿನ ತಿಮ್ಮಾಪೂರ ಗ್ರಾಮದ ಜಮೀನೊಂದರಲ್ಲಿ ಈ ಹತ್ಯೆ ನಡೆದಿದೆ. ಕೊಪ್ಪಳ(koppla) ಜಿಲ್ಲೆಯ ಮಾಳೆಕೊಪ್ಪ ಗ್ರಾಮದ ನಿವಾಸಿ ಸಣ್ಣಹನಂತಪ್ಪ ವಜ್ರದ್ (60) ಹತ್ಯೆಯಾದವರು. ಸಣ್ಣಹನಂತಪ್ಪ ಮತ್ತು ಸೆ್ನೇಹಿತರು ಸೇರಿ ರುಂಡ ಕತ್ತರಿಸಿರುವ ದುಷ್ಕರ್ಮಿಗಳು, ಮುಂಡವನ್ನು ಜಮೀನಿನಲ್ಲೇ ಬಿಟ್ಟು, ರುಂಡ ಸಮೇತ ಪರಾರಿ(escape) ಆಗಿದ್ದಾರೆ. ಮೆಣಸಿನಕಾಯಿ ಕಾವಲಿಗಾಗಿ ಸಣ್ಣದೊಂದು ಗುಡಿಸಲು ನಿರ್ಮಿಸಿಕೊಂಡು ಮಲಗಿದ್ದರು. ಈ ವೇಳೆ ಕೊಲೆಗಡುಕರು ಸಣ್ಣಹನಂತಪ್ಪರ ತಲೆಯನ್ನೇ ಕಡಿದಿದ್ದಾರೆ.

ಭೀಕರ ಹತ್ಯೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಗದಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು, ಕೊಲೆಗಾರರು ಯಾರೆಂದು ಹುಡುಕಾಟ ನಡೆಸಿದ್ದಾರೆ.


[ays_poll id=3]