This is the title of the web page
This is the title of the web page
Crime NewsState News

ಜಾಮೀನು ಮಂಜೂರಾತಿಗೆ ನಕಲಿ ಶ್ಯೂರಿಟಿ.. Fake surety for sanction of bail..


K2kannadanews.in

ನ್ಯೂಸ್ Desk : ವಿವಿಧ ಪ್ರಕರಣಗಳಲ್ಲಿ (Different cases) ಬಂಧನಕ್ಕೊಳಗಾಗಿ ನ್ಯಾಯಾಲಯದಲ್ಲಿ ಜಾಮೀನಿಗೆ(jamein) ನಕಲಿ ದಾಖಲೆಗಳನ್ನು (fack document) ಸೃಷ್ಟಿಸಿ ನ್ಯಾಯಾಲಯದಲ್ಲಿ ಶ್ಯೂರಿಟಿಗೆ (surety in court)ನೀಡುತ್ತಿದ್ದ ಆರೋಪದಡಿ ಮಹಿಳೆ ಸೇರಿ 9 ಮಂದಿಯನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ ಘಟನೆ ಜರುಗಿದೆ.

ರಾಯಚೂರು (raichur) ಮೂಲದ ವೀರೇಶ್‌(37) (veeresh), ಅಮರೇಶ್‌(38)(amresh) ಸೇರಿ, ಗಂಗಾವತಿ (gangavti) ಉಮೇಶ್‌ ಕುಮಾರ್‌ (48), ಬೆಂಗಳೂರಿನ (Bangalore) 4 ಮಾದವಾರ ನಿವಾಸಿ ಪ್ರಕಾಶ್‌ (42), ಕೊಪ್ಪಳ(koppal) ಜಿಲ್ಲೆಯ ಸಂತೋಷ್‌ (29), ನಂಜನಗೂಡು ನಿವಾಸಿ ಉಮೇಶ್‌ (49), ಶ್ರೀನಿವಾಸಪುರ ತಾಲೂಕಿನ ನಾಗರಾಜ್‌ (46), ಮಂಜುನಾಥ (48) ಮತ್ತು ಬೆಂಗಳೂರಿನ ಆರ್‌.ಟಿ.ನಗರ ನಿವಾಸಿ ತಬಸಮ್‌ (38) ಬಂಧಿತರು. ಈ ವೇಳೆ 35 ನಕಲಿ ಆಧಾರ್‌ ಕಾರ್ಡ್‌ಗಳು ಮತ್ತು 7 ಸ್ವತ್ತಿನ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಆರೋಪಿಗಳು ಕೆ.ಜಿ.ರಸ್ತೆಯ ಮೈಸೂರು ಬ್ಯಾಂಕ್‌ ಸಮೀಪದ (near mysere bank)  ಟೀ ಅಂಗಡಿ ಬಳಿಯೇ ಅಕ್ರಮ ಅಡ್ಡೆ(illegal adde) ಮಾಡಿಕೊಂಡಿದ್ದರು. ಸಮೀಪದ ಕೋರ್ಟ್‌ಗೆ (court) ವಿವಿಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ಆರೋಪಿಗಳು ಅಥವಾ ಅವರ ಸಂಬಂಧಿಕರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಇಂತಿಷ್ಟು ಹಣ ನೀಡಿದರೆ, ಶ್ಯೂರಿಟಿ ನೀಡುವುದಾಗಿ ಹೇಳುತ್ತಿದ್ದರು. ಅದರಂತೆ 40-50 ಸಾವಿರ ರೂ. ಪಡೆದು ನಕಲಿ ಆಧಾರ್‌ ಕಾರ್ಡ್‌, ಜಮೀನಿನ ಪಹಣಿ, ಸೇಲ್‌ ಡೀಡ್‌, ಮ್ಯೂಟೇಷನ್‌ಗಳನ್ನು ಕೋರ್ಟ್‌ಗೆ ಸಲ್ಲಿಸಿ ಶ್ಯೂರಿಟಿ ನೀಡಿ ಬಿಡುಗಡೆ ಮಾಡಿಸುತ್ತಿದ್ದರು. ಈ ಮಾಹಿತಿ ಪಡೆದ ಸಿಸಿಬಿಯ ಪೂರ್ವ ವಿಭಾಗ ಎಸಿಬಿ ಪುಟ್ಟಸ್ವಾಮಿಗೌಡ ಮತ್ತು ಇನ್‌ಸ್ಪೆಕ್ಟರ್‌ ವಿ.ಬಾಲಾಜಿ ನೇತೃತ್ವದ ತಂಡ ಕಾರ್ಯಾಚರಣೆ ಆರೋಪಿಗಳನ್ನು ಬಂಧಿಸಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಆರೋಪಿಗಳ ವಿಚಾರಣೆಯಲ್ಲಿ ಒಂದೇ ಹೆಸರಿನ ಬೇರೆ ಬೇರೆ ನಂಬರ್‌ ಇರುವ ಆಧಾರ್‌ ಕಾರ್ಡ್‌, ಬೇರೆ ಬೇರೆ ವ್ಯಕ್ತಿಗಳ ಆಧಾರ್‌ ಕಾರ್ಡ್‌, ಹೆಸರು ತಿದ್ದುಪಡಿ ಮಾಡಿರುವ ಜಮೀನಿನ ಪಹಣಿ ಹಾಗೂ ಮ್ಯೂಟೇಷನ್‌ಗಳನ್ನು ಕೋರ್ಟ್‌ಗೆ ಅಸಲಿ ದಾಖಲೆಗಳೆಂದು ಸಲ್ಲಿಸಿ ಸರ್ಕಾರಕ್ಕೆ ವಂಚಿಸಿದ್ದಾರೆ ಎಂಬುದು ಗೊತ್ತಾಗಿದೆ.


[ays_poll id=3]