This is the title of the web page
This is the title of the web page
international News

37 ವರ್ಷಗಳಾದರೂ ಕೊಳೆತಿಲ್ಲ ಮಾನವನ ಶವ..!


K2 ನ್ಯೂಸ್ ಡೆಸ್ಕ್ : ಹಿಮಪವ೯ತಗಳನ್ನು ಹತ್ತುವುದು ಪ್ರಪಂಚದ ಆಸಕ್ತಿ ಮತ್ತು ಅಪಾಯಕಾರಿ ಕ್ರೀಡೆಯಾಗಿದೆ. ವಿಶ್ವದ ಎತ್ತರದ ಪರ್ವತ ಶಿಖರಗಳನ್ನು ಹತ್ತುವುದು ಸಾಧನೆಯಾಗಿದೆ. ಇಂತಹ ಪ್ರದೇಶದಲ್ಲಿ ಟ್ರೆಕ್ಕಿಂಗ್ ತುಂಬಾ ಸವಾಲಿನದು. 37 ವರ್ಷಗಳ ಹಿಂದೆ ಇಂತಹ ದುಸ್ಸಾಹಸಕ್ಕೆ ಕೈಹಾಕಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ದೊರೆತಿದೆ.

ಇಂತಹ ಪರ್ವತಗಳನ್ನ ಹತ್ತುವಾಗ ಯಾವುದೇ ಸಮಸ್ಯೆಯಿಂದ ಸಾಯುತ್ತಾರೆ. ಅಂತಹ ಸಾವಿನ ನಂತರ ಮೃತ ದೇಹವನ್ನು ಕೆಳಗೆ ತರುವುದು ಕಷ್ಟ. ಮೃತ ದೇಹವನ್ನು ಅಲ್ಲಿಯೇ ಬಿಡುವುದು ವಾಡಿಕೆ. 37 ವರ್ಷಗಳಿಂದ ಹಿಮದಲ್ಲಿ ಹೂತು ಹೋಗಿದ್ದ ಮೃತದೇಹ ಇದೀಗ ಪತ್ತೆಯಾಗಿದೆ. ನೈಋತ್ಯ ಸ್ವಿಟ್ಜರ್ಲೆಂಡ್‌ನ ಪ್ರಸಿದ್ಧ ಮ್ಯಾಟರ್‌ಹಾರ್ನ್ ಶಿಖರದ ಆಗ್ನೇಯ ಹಿಮನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ದೇಹ ಒಂದುಚೂರು ಕೂಡ ಕೊಳೆತಿಲ್ಲ. 37 ವರ್ಷಗಳ ಹಿಂದೆ ಅಲ್ಲಿ ನಾಪತ್ತೆಯಾಗಿದ್ದ ಜರ್ಮನ್ ಪ್ರಜೆಯ ಶವ ಅದು ಎಂದು ಡಿಎನ್ ಎ ಪರೀಕ್ಷೆಯಿಂದ ದೃಢಪಟ್ಟಿದೆ.

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಇಂತಹ ಹಲವು ಸ್ಥಳಗಳಲ್ಲಿ ಗ್ಲೇಸಿಯರ್ ಕರಗುವಿಕೆ ಹೆಚ್ಚುತ್ತಿದೆ. ಬಹುಕಾಲ ಮಂಜುಗಡ್ಡೆಯಿಂದ ಆವೃತವಾಗಿದ್ದ ಸ್ಥಳಗಳೂ ಈಗ ಕರಗುತ್ತಿವೆ. ಇದರಿಂದಾಗಿ ಹಲವು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪರ್ವತಾರೋಹಿಗಳು ಮತ್ತು ಸ್ಕೀಯರ್‌ಗಳ ಮೃತದೇಹಗಳು ಪತ್ತೆಯಾಗಿವೆ. ಇದೀಗ ಗುರುತಿಸಲಾದ ವ್ಯಕ್ತಿ ಸೆಪ್ಟೆಂಬರ್ 1986 ರಲ್ಲಿ ನಾಪತ್ತೆಯಾಗಿದ್ದು 38 ವರ್ಷ ವಯಸ್ಸಿನ ಜರ್ಮನ್ ಪ್ರಜೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆ ವೇಳೆ ಅವರು ನಾಪತ್ತೆಯಾದಾಗ ಶೋಧ ಕಾರ್ಯ ತೀವ್ರಗೊಂಡಿತ್ತು. ಆದರೆ, ಹಲವು ದಿನಗಳ ನಂತರ ಅವರ ಶವ ಪತ್ತೆಯಾಗದ ಕಾರಣ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ 37 ವರ್ಷಗಳ ಬಳಿಕ ಅವರ ಮೃತದೇಹ ಪತ್ತೆಯಾಗಿದೆ. ಹಿಮ ಕರಗಿದ ಕಾರಣ ಈ ಶವ ಗೋಚರಿಸಿರುವುದು ಗಮನಾರ್ಹ.

ಅದರಂತೆ ಮೃತದೇಹವನ್ನು ಹೊರತೆಗೆದು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆನುವಂಶಿಕ ಪರೀಕ್ಷೆಯು ಅವನು ಯಾರೆಂದು ದೃಢಪಡಿಸಿತು. ಆದರೆ, ಅವರ ಹೆಸರು ಸೇರಿದಂತೆ ಯಾವುದೇ ವೈಯಕ್ತಿಕ ಮಾಹಿತಿ ಹೊರಬಿದ್ದಿಲ್ಲ.


[ays_poll id=3]