This is the title of the web page
This is the title of the web page
State NewsVideo News

ಬರಗಾಲ, ಬೆಲೆ ಏರಿಕೆ ಗ್ರಾಹಕರು ಖರೀದಿಗೆ ಹಿಂದೇಟು


ರಾಯಚೂರು : ಬೆಳಕಿನ ಹಬ್ಬ ದೀಪಾವಳಿಗೆ ಈ ಬಾರಿ ಹೂ, ಹಣ್ಣುಗಳ ಬೆಲೆ ಗಗನಕ್ಕೇರಿ ಅದ್ದೂರಿ ಹಬ್ಬದ ವಾತವರಣ ಇಲ್ಲದಂತಾಗಿದೆ. ಕಾರಣ ರೈತರು, ಜನ ಸಾಮಾನ್ಯರು ಹಬ್ಬ ಆಚರಣೆಗೆ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗುತ್ತಿಲ್ಲ.

ಹೌದು ಮಳೆ ಬಾರದ ಹಿನ್ನೆಲೆಯಲ್ಲಿ ಹೂ, ಹಣ್ಣು, ತರಕಾರಿಗಳು ಸರಿಯಾಗಿ ಬೆಳೆಯದೆ, ಬೇಡಿಕೆ ಹೆಚ್ಚಾದ ಕಾರಣ ಬೆಲೆ ಗಗನಕ್ಕೇರಿ ಅದ್ದೂರಿ ಆಚರಣೆಗೆ ಅಡ್ಡಿಯಾಗಿದೆ. ಬೆಲೆ ಏರಿಕೆಯಿಂದ ಹಬ್ಬದ ವಾತಾವರಣ ಅಷ್ಟೇನು ಇಲ್ಲ ಎಂಬಂತಾಗಿದೆ. ಅಮವಾಸ್ಯೆ ಎರಡು ದಿನ ಪಾಡ್ಯ ಒಂದಿನ ಸೇರಿ ಒಟ್ಟು ಮೂರು ದಿನ ಹಬ್ಬವಿದೆ, ಆದರೆ ಈ ಬಾರಿ ಮಳೆ ಸರಿಯಾಗಿ ಇಲ್ಲದ ಕಾರಣ ರೈತರಿಗೆ ತೊಂದರೆಯಾಗಿದೆ.

ರೈತರು ನೆಮ್ಮದಿಯಿಂದ ಇದ್ದರೆ, ನಮ್ಮ ವ್ಯಾಪಾರ ಸರಾಗವಾಗಿ ಆಗತ್ತೆ. ಹಾಗಾಗಿ ಬೆಲೆ ಏರಿಕೆ ಬಿಸಿಯಿಂದ ಜನ ಈ ಬಾರಿ ದೀಪಾವಳಿ ಹೆಸರಿಗೆ ಮಾತ್ರ ಸರಳವಾಗಿ ಆಚರಿಸಲಾಗುತ್ತಿದೆ ಎನ್ನುತ್ತಿದ್ದಾರೆ ವ್ಯಾಪಾರಸ್ಥರು.


[ays_poll id=3]