This is the title of the web page
This is the title of the web page
Crime NewsNational News

ಸರ್ಕಾರಿ ಆಸ್ಪತ್ರೆಯಲ್ಲಿ ಬೆತ್ತಲಾಗಿ ಅಡ್ಡಾಡಿದ ಡಾಕ್ಟರ್..!‌


K2kannadanews.in

Viral News : ಸರ್ಕಾರಿ ಆಸ್ಪತ್ರೆ (Government hospital) ಒಂದರಲ್ಲಿ ವೈದ್ಯ (Doctor) ಮಹಾಶಯನೊಬ್ಬ ಬೆತ್ತಲೆಯಾಗಿ (naked) ಓಡಾಡಿರುವ ವಿಲಕ್ಷಣ ಘಟನೆ ಸಂಭಾಜಿನಗರ ಜಿಲ್ಲೆಯಲ್ಲಿ ನಡೆದಿದೆ.

ಹೌದು ಮಹಾರಾಷ್ಟ್ರದ (Maharashtra) ಈ ಹಿಂದೆ ಔರಂಗಾಬಾದ್ (Orngabad) ಎಂದು ಕರೆಯಲಾಗುತ್ತಿದ್ದ, ರಾಜ್ಯದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿನ ಆಸ್ಪತ್ರೆಯ ಆವರಣದಲ್ಲಿ ಬೆತ್ತಲಾಗಿ ಓಡಾಡಿರುವ ವೀಡಿಯೋಗಳು ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ (Social media) ಹರಿದಾಡುತ್ತಿದೆ. ಮೂಲಗಳ ಪ್ರಕಾರ ಬಿಡ್ಕಿನ್ ಗ್ರಾಮಾಂತರ ಸರ್ಕಾರಿ ಆಸ್ಪತ್ರೆಯ ವೈದ್ಯ ಮದ್ಯದ ಚಟದಿಂದ (Alcohol addiction) ಬಳಲುತ್ತಿದ್ದು, ಈ ಹಿನ್ನಲೆ ಬೆತ್ತಲಾಗಿ ಆಸ್ಪತ್ರೆಯ ಸುತ್ತಲೂ ಓಡಾಡಿದ್ದಾರೆ ಎನ್ನಲಾಗಿದೆ.

ಘಟನೆಯ ಕುರಿತು ಜಿಲ್ಲಾ ಆರೋಗ್ಯ ಸೇವಾ (health) ವಿಭಾಗದ ಮುಖ್ಯಸ್ಥರಾದ ಜಿಲ್ಲಾ ಸಿವಿಲ್ ಸರ್ಜನ್ ಡಾ. ದಯಾನಂದ ಮೋತಿಪಾವ್ಲೆ ಮಾತನಾಡಿ, ಈ ಬಗ್ಗೆ ತನಿಖೆ (investigation) ನಡೆಯುತ್ತಿದ್ದು, ತಪ್ಪಿತಸ್ಥರೆಂದು ಕಂಡುಬಂದಲ್ಲಿ ವೈದ್ಯನ ವಿರುದ್ಧ ಕಠಿಣ ಕ್ರಮ (action) ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.


[ays_poll id=3]