This is the title of the web page
This is the title of the web page
State NewsVideo News

ಕುಡಿಯುವ ನೀರಿಗಾಗಿ ಹಾಹಾಕಾರ : 10 ಟ್ಯಾಂಕರ್ ನೀರಿನ ದಾಹ ನೀಗಿಸುವುದೇ..?


K2kannadanews.in

Water problem ಮಸ್ಕಿ : ಬೇಸಿಗೆ ಆರಂಭಕ್ಕೂ ಮುನ್ನವೇ ಮಸ್ಕಿ ಪಟ್ಟಣದಲ್ಲಿ (Masky city) ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಕೆರೆಯ ನೀರು (Lake water) ಸಂಪೂರ್ಣವಾಗಿ ಖಾಲಿಯಾಗಿ ಪಟ್ಟಣದ ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ಪಟ್ಟಣದ ಕುಡಿಯುವ ನೀರಿನ ಕೆರೆಯಲ್ಲಿ ನೀರು ಖಾಲಿಯಾಗಿದೆ. ತುಂಗಭದ್ರಾ (tungbhadra left canals) ಎಡದಂಡೆ ಕಾಲುವೆಯಿಂದ ನಗರದ ಕೆರೆಗೆ ನೀರು ಪಡೆದು ಪಟ್ಟಣದ ನಿವಾಸಿಗಳಿಗೆ ಕುಡಿವ ನೀರು ಪೂರೈಸಲಾಗುತ್ತಿತ್ತು. ಸಧ್ಯ ಕಾಲುವೆಯಲ್ಲಿ ನೀರಿಲ್ಲದ ಕಾರಣ ಕೆರೆ ಖಾಲಿ ಖಾಲಿಯಾಗಿದೆ. ಇದೀಗ ಪಟ್ಟಣ ಪಂಚಾಯತಿ ಅಧಿಕಾರಿಗಳು 10 ಟ್ಯಾಂಕರ್ (Tankar) ಮೂಲಕ ಬಡಾವಣೆಗಳಿಗೆ ನೀರು ಪೂರೈಸುತ್ತಿದ್ದಾರೆ. ಆದರೇ ಇಲ್ಲಿ ಟ್ಯಾಂಕರ್ ಮೂಲಕ ಕುಡುತ್ತಿರುವ ನೀರು ಸಮಸ್ಯೆ ನಿವಾರಿಸಲು ಸಾಧ್ಯವಾ ಎಂಬ ಪ್ರಶ್ನೆ ಕಾಡುತ್ತಿದೆ.


[ays_poll id=3]