
ರಾಯಚೂರು : ಆಹಾರ ಅರಸಿ ಜನ ವಸತಿ ಪ್ರದೇಶಕ್ಕೆ ಬಂದ ಮೊಸಳೆ ಮನೆಯ ಕೋಣೆಯೊಳಗೆ ನುಗ್ಗಿ ಕೆಲಕಾಲ ನಿವಾಸಿಗಳನ್ನು ಆತಂಕ ಗಳಿಸಿದ ಘಟನೆ ನಡೆದಿದೆ.
ಜಿಲ್ಲೆಯ ರಾಯಚೂರು ತಾಲೂಕಿನ ದೇವಸೂಗೂರು ಗ್ರಾಮದ ಜನತಾ ಕಾಲೋನಿಯಲ್ಲಿ ಮೊಸಳೆ ಮನೆಗೆ ನುಗ್ಗಿದ ಘಟನೆ ನಡೆದಿದೆ. ಇನ್ನು ಏಕಾಏಕಿ ಮನೆಯಲ್ಲಿ ಪ್ರತ್ಯಕ್ಷವಾದ ಮೊಸಳೆಯನ್ನು ಕಂಡು ನಿವಾಸಿಗಳು ಸಾಕಷ್ಟು ಭಯಭೀತರಾಗಿದ್ದರು. ಕೊನೆ ಎಂದಕ್ಕೆ ನುಗ್ಗಿದ ಮೊಸಳೆಯನ್ನು ಹಿಡಿಯಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ತದನಂತರ ಅಕ್ಕಪಕ್ಕದ ಮನೆಯವರ ಸಹಾಯದಿಂದ ಕೊನೆಗೂ ಮೊಸಳೆಯನ್ನು ಹಿಡಿಯುವಲ್ಲಿ ನಿವಾಸಿಗಳು ಯಶಸ್ವಿಯಾಗಿದ್ದಾರೆ. ಮೊಸಳೆ ಸೆರೆ ಹಿಡಿಯಲು ಮುನ್ನಾದ ನಿವಾಸಿಗಳ ಮೇಲೆ ಪ್ರತಿ ದಾಳಿ ನಡೆಸಿದೆ. ಯಾವುದಕ್ಕೂ ಭಯ ಪಡೆದ ಸ್ಥಳೀಯರು ವ್ಯವಸ್ತಿವಾಗಿ ಮೊಸಳೆ ಮುಖಕ್ಕೆ ಗೋಣಿಚೀಲ ಹಾಕಿ ಹಿಡಿದು ಮುಖ ಮುಚ್ಚಿ ಸೆರೆ ಹಿಡಿದ್ದಾರೆ. ನಂತರ ಶಕ್ತಿನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆಯವರು ಮೊಸಳೆಯನ್ನು ತೆಗೆದುಕೊಂಡು ಹೋಗಿದ್ದಾರೆ.
ದೇವಸೂಗೂರು ಗ್ರಾಮ ಕೃಷ್ಣ ಪಕ್ಕದಲ್ಲಿ ಇರುವುದರಿಂದ, ಆಗಾಗ ಮೊಸಳೆಗಳು ನದಿ ತೀರದಲ್ಲಿ ಕಂಡು ಬರುತ್ತಿದ್ದವು. ಇದೀಗ ಮಳೆ ಕೊರತೆಯಿಂದ ಕೃಷ್ಣ ನದಿಯಲ್ಲಿ ಸಮಪರ್ಕವಾಗಿ ನೀರಿಲ್ಲ. ಇದರಿಂದ ಜಲಚರ ಪ್ರಾಣಿಗಳಿಗೆ ಸಂಕಷ್ಟ ಎದುರಾಗಿದ್ದು, ಮೊಸಳೆ ಸಹ ಆಹಾರ ಅರಿಸಿ ನದಿಯಿಂದ ಜನರು ವಾಸಿಸುವ ಪ್ರದೇಶಕ್ಕೆ ಬಂದಿರಬಹುದೆಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಮೊಸಳೆ ಕಂಡು ಭಯಭೀತರಾಗಿದ್ದ ಜನರು, ಸೆರೆ ಹಿಡಿದ ನಂತರವೇ ನೆಮ್ಮದಿಯ ನಿಟ್ಟು ಉಸಿರುವ ಬಿಟ್ಟಿದ್ದಾರೆ.
![]() |
![]() |
![]() |
![]() |
![]() |
[ays_poll id=3]