
ರಾಯಚೂರು : ಆರ್ ಟಿ ಪಿ ಎಸ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ವಿದ್ಯುತ್ ಅವಘಡ ಜರುಗಿದ್ದು ಗುತ್ತಿಗೆ ಕಾರ್ಮಿಕರನ್ನು ಬಲಿ ಪಡೆದುಕೊಂಡ ಘಟನೆ ಜರುಗಿದೆ.
ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಇರುವ ಆರ್ ಟಿ ಪಿ ಎಸ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಇತ್ತೀಚಿಗೆ ಸಾಕಷ್ಟು ಅವಘಡಗಳು ಜರುಗುತ್ತಿವೆ. ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಯಾದಗಿರಿ ಜಿಲ್ಲೆಯ ಮೂಲದ 45 ವರ್ಷದ ನಿಂಗಪ್ಪ ಸಂಗಪ್ಪ ವಿದ್ಯುತ್ ಅವಘಡದಲ್ಲಿ ಮೃತಪಟ್ಟಿದ್ದಾರೆ. ಮೃತ ನಿಂಗಪ್ಪ ಆರ್‌ಟಿಪಿಎಸ್‌ನ 5 ಮತ್ತು 6ನೇ ಘಟಕದ EE(AHP-2) ವಿಭಾಗದಲ್ಲಿ ಹೆಲ್ಪರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ 4ನೇ ಯೂನಿಟ್ ಹತ್ತಿರ ವೆಲ್ಡಿಂಗ್ ಮಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಕಾರ್ಮಿಕರು ಹೇಳುತ್ತಿದ್ದಾರೆ.
ಇನ್ನು ಘಟನೆಯ ನಂತರ ಆರ್‌ಟಿಪಿಎಸ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಗುತ್ತಿಗೆ ಕಾರ್ಮಿಕರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಶಕ್ತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
![]() |
![]() |
![]() |
![]() |
![]() |
[ays_poll id=3]