
K2 ಕ್ರೈಂ ನ್ಯೂಸ್ : ಬಸ್ ನ ಹಿಂಬದಿಯ ಎಕ್ಸಲ್ ಕಟ್ಟಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಯಲ್ಲಿ ಪಲ್ಟಿಯಾಗಿ ಸ್ಥಳದಲ್ಲಿ ಪ್ರಯಾಣಿಕನೊಬ್ಬ ಮೃತಪಟ್ಟ ಘಟನೆ ನೆಡದಿದೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಸಮೀಪದ ಮುಳ್ಳೂರು ಕ್ರಾಸ್ ಹತ್ತಿರ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಪಲ್ಟಿಯಾಗಿದೆ. ಲಿಂಗಸೂರು – ತಾವರಗೇರಾ ರಾಜ್ಯ ಹೆದ್ದಾರಿಯಲ್ಲಿ ಘಟನೆ ಜರುಗಿದೆ. ಕೊಪ್ಪಳ ಡಿಪೋ ಗೆ ಸೇರಿದ ಬಸ್ ಬೀದರ್ ದಿಂದ ಕೊಪ್ಪಳ ಕ್ಕೆ ಹೋಗುವಾಗ ಮುಳ್ಳೂರು ಸಮೀಪದಲ್ಲಿ ಬಸ್ ನ ಹಿಂಬದಿಯ ಎಕ್ಸಲ್ ಕಟ್ಟಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಯಲ್ಲಿ ಪಲ್ಟಿಯಾಗಿದೆ.
ಸ್ಥಳದಲ್ಲಿ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದು ಮೃತನು ನಾಗಲಾಪೂರು ಗ್ರಾಮದ ಅಯ್ಯಪ್ಪ ಮಡಿವಾಳರ (27) ಎಂದು ಗುರುತಿಸಲಾಗಿದೆ. ಹಲವರಿಗೆ ತಿರುಚಿದಗಾಯ, ಕೆಲವರಿಗೆ ಗಂಭಿರಗಾಯವಾಗಿವೆ ಹೆಚ್ಚಿನ ಚಿಕಿತ್ಸೆ ಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ತುರವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನೆಡದಿದೆ.
![]() |
![]() |
![]() |
![]() |
![]() |
[ays_poll id=3]