This is the title of the web page
This is the title of the web page
Crime News

ಮಲಗಿದ್ದಲೇ ಅಣ್ಣ-ತಂಗಿ ಸಾವು : ಸಾವಿನ ಬಗ್ಗೆ ಅನುಮಾನ..!


K2 ಕ್ರೈಂ ನ್ಯೂಸ್ : ರಾತ್ರಿ ಊಟ ಮಾಡಿ ಮಲಗಿದ ಅಣ್ಣ ತಂಗಿ ಬೆಳಗಾಗುವ ಹೊತ್ತಿಗೆ ಶವವಾದ ಘಟನೆ ಚಿಗಟೇರಿ ಗ್ರಾಮದ ಮೆನಯೊಂದರಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದ ಮೆನಯೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಅಣ್ಣ, ತಂಗಿ ಶವ ಪತ್ತೆಯಾಗಿದ್ದು, ಕೋಟ್ರೇಶ್ (32) ಹಾಗೂ ಕಾವ್ಯಾ (28) ಸಾವನ್ನಪ್ಪಿದ ಅಣ್ಣ ತಂಗಿ. ಅಕ್ಟೋಬರ್ 07 ತಡರಾತ್ರಿಯೇ ಅಣ್ಣ-ತಂಗಿ ಸಾವನ್ನಪ್ಪಿದ್ದು, ಇಂದು ಬೆಳಗ್ಗೆ ಸಂಬಂಧಿಕರೊಬ್ಬರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಚಿಗಟೇರಿ ಪೊಲೀಸರು ಹಾಗೂ ಜಯನಗರ ಎಸ್ಪಿ ಹರಿಬಾಬು ಅಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು. ಆಸ್ತಿಗಾಗಿ ಅಣ್ಣ-ತಂಗಿಯನ್ನು ಕೊಲೆ ಮಾಡಿರಬಹುದು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುದ್ದಾರೆ.


[ays_poll id=3]