
K2 ಮೂವಿ ನ್ಯೂಸ್ : ಸದ್ದಿಲ್ಲದೆ ಬಿಡುಗಡೆಗೊಂಡ ಬ್ರೋ ಚಿತ್ರ ಇದೀಗ ಸಾಕಷ್ಟು ಯಶಸ್ಸು ಕಾಣುತ್ತಿದೆ. ಪ್ರಪಂಚದಾದ್ಯಂತ ತೆರೆಕಂಡ ಮೊದಲ ದಿನ 37 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಿಗ್ ಬಜೆಟ್ ಮೂವಿಗಳಿಗೆ ಟಕ್ಕರ್ ನೀಡುತ್ತಿದೆ.
ಹೌದು ಬ್ರೋ ಸಿನಿಮಾ ನಿನ್ನೆ ತೆರೆಕಂಡಿದ್ದು ಮೊದಲ ದಿನವೇ 25 ಕೋಟಿ ಕಲೆಕ್ಷನ್ ಮಾಡಿದೆ. ಕರಾವಳಿ ಆಂಧ್ರಭಾಗದಲ್ಲಿ ಮೊದಲ ದಿನ 12 ಕೋಟಿ ಸಿನಿಮಾ ಗಳಿಸಿತ್ತು. ಹಾಗಂತ ಇದು ಸಣ್ಣ ಮೊತ್ತವಂತೂ ಅಲ್ಲವೇ ಅಲ್ಲ ಯಾಕಂದ್ರೆ ಬಿಗ್ ಬಜೆಟ್ ಸಿನಿಮಾಗಳಾದ ಆದಿಪುರುಷ 16 ಕೋಟಿ, ವಾಲ್ಟರ್ ವೀರಯ್ಯಾ 14 ಕೋಟಿ ಕಲೆಕ್ಷನ್ ಪಡೆದುಕೊಂಡಿತ್ತು ಅದಕ್ಕೆ ಕಂಪೇರ್ ಮಾಡಿದರೆ ಬ್ರೋ ಕಲೆಕ್ಷನ್ ತೃಪ್ತಿದಾಯಕವಾಗಿದೆ.
ಉತ್ತರ ಅಮೆರಿಕಾದಲ್ಲೂ ಸಿನಿಮಾ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದ್ದು, ವಿಶ್ವದಾತ್ಯಂತ ಒಟ್ಟು 37 ಕೋಟಿ ಬಾಚಿಕೊಂಡಿದೆ ಸಿನಿಮಾ. ಸಮುತಿರಕನಿ ನಿರ್ದೇಶನ, ತ್ರಿವಿಕ್ರಮ್ ಶ್ರೀನಿವಾಸ್ ಅವರ ಚಿತ್ರಕಥೆ ಇದೆ ಈ ಸಿನಿಮಾಕ್ಕೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಝೀ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರವು 2021 ರ ತಮಿಳು ಚಲನಚಿತ್ರ ವಿನೋದಯ ಸಿತಮ್‌ನ ರೂಪಾಂತರವಾಗಿದೆ.
![]() |
![]() |
![]() |
![]() |
![]() |
[ays_poll id=3]