This is the title of the web page
This is the title of the web page
Crime NewsVideo News

ಭಾರತ್ ಮಾಲಾ ಹೆದ್ದಾರಿ ಪಕ್ಕದಲ್ಲಿ ವ್ಯಕ್ತಿ ಶವ ಪತ್ತೆ : ಕೊಲೆ ಶಂಕೆ


ರಾಯಚೂರು : ಕೂಡ್ಲುರು ಮತ್ತು ವಡ್ಲುರು ಗ್ರಾಮದ ಬಳಿ ಹಾದು ಹೋಗಿರುವ, ಭಾರತ್ ಮಾಲ ಹೆದ್ದಾರಿ ಪಕ್ಕದಲ್ಲಿ ವ್ಯಕ್ತಿಯ ಶವ ಪತಿಯಾಗಿದ್ದು, ಕೊಲೆ ಮಾಡಿ ಎಸೆದಿದ್ದಾರೆ ಎಂದು ಪತ್ನಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ರಾಯಚೂರು ತಾಲೂಕಿನ ಕೂಡ್ಲುರ್ ಮತ್ತು ವಡ್ಲುರು ಗ್ರಾಮಗಳ ಬಳಿ, ನಿರ್ಮಾಣ ಹಂತದ ಭಾರತ್ ಮಾಲ ಹೈವೇ ರಸ್ತೆಯಲ್ಲಿ ಘಟನೆ ಜರುಗಿದೆ. ಕೂಡ್ಲುರ್ ಗ್ರಾಮದ ಸುರೇಶ(40) ಮೃತಪಟ್ಟ ವ್ಯಕ್ತಿ. ನೆರೆಯ ರಾಜ್ಯವಾದ ತೆಲಂಗಾಣ ರಾಜ್ಯಕ್ಕೆ ಶೇಂದಿ ಕುಡಿಯಲು ಹೋಗಿ ವಾಪಸ್ ಬರುತ್ತಿದ್ದ ವೇಳೆ ಘಟನೆ ನಡೆದಿದೆ.

ತನ್ನ ಸಂಬಧಿಕ ಅಯ್ಯಪ್ಪ ಜೊತೆ ಹೋಗಿ ಸಂಜೆ ಮರಳಿ ಬರುವಾಗ ಅಯ್ಯಪ್ಪ ನನ್ನು ಹೆಗ್ಗಸನಹಳ್ಳಿ ಗ್ರಾಮದಲ್ಲಿ ಬಿಟ್ಟು, ಕೂಡ್ಲುರಿಗೆ ವಾಪಸ್ ಆಗುತ್ತಿದ್ದ ವೇಳೆ ಸಾವಿಗೀಡಾಗಿದ್ದಾನೆ. ರಸ್ತೆ ಮದ್ಯೆ ಯಾರೋ ದುಷ್ಕರ್ಮಿಗಳು ಸುರೇಶನನ್ನು ಕೊಲೆ ಮಾಡಿ ಸಾಯಿಸಿದ್ದಾರೆ ಎಂದು ಪತ್ನಿ ಸಾಬಿ ಬಾ ಶಂಖ್ಯಾ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹೆಚ್ಚಿನ ತನಿಖೆಗಾಗಿ ಶ್ವಾನ ದಳವನ್ನು ಕೂಡ ಸ್ಥಳಕ್ಕೆ ಕರೆಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.


[ays_poll id=3]