This is the title of the web page
This is the title of the web page
Local News

ಆ.12,13 ಅಮೃತಮಹೋತ್ಸವ, ಪುಣ್ಯಸ್ಮರಣೋತ್ಸವ ಕಾರ್ಯಕ್ರಮ


ರಾಯಚೂರು : ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಸಜ್ಜಲಗುಡ್ಡ ಶ್ರೀಮಠದ ಪ್ರಸಾದ ನಿಲಯದ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಆ.12 ಹಾಗೂ 13ರಂದು ಪ್ರಸಾದ ನಿಲಯದ ಅಮೃತಮಹೋತ್ಸವ ಹಾಗೂ ಗುಡುದೂರು ಗುರುಶ್ರೇಷ್ಠ ಶ್ರೀ ದೊಡ್ಡಬಸವಾರ್ಯ ಶಿವಯೋಗಿಗಳ ಕರಸಂಜಾತೆ ಪರಮತಪೋನಿಧಿ ಜಗನ್ನಾತ ಸಜ್ಜಲಗುಡ್ಡದ ಶ್ರೀ ಶರಣಮ್ಮ ತಾಯಿಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಸುಕ್ಷೇತ್ರ ಸಜ್ಜರಿಗುಳ್ಳದ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಹಳೆಯ ವಿದ್ಯಾರ್ಥಿ ಅಣ್ಣಪ್ಪ ಮೇಟಿಗೌಡ ಹೇಳಿದರು.

ಕಾರ್ಯಕ್ರಮವು ಶನಿವಾರದಂದು ಜಗನ್ಮಾತೆ ಶರಣಮ್ಮ ತಾಯಿಯವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಪರಮಾಪೂಜ್ಯ ನೀಲಕಂಠರಾರ್ಯ ತಾತನವರ ಅಮೃತ ಹಸ್ತದಿಂದ ಷಟಸ್ಥಲ ಧ್ವಜಾರೋಹಣ, ಅಮ್ಮನವರ ಬೆಳ್ಳಿ ಮೂರ್ತಿಯ ಮೆರವಣಿಗೆ ಹಾಗೂ ನೂತನ ರಜತ ಮೂರ್ತಿಯ ಅನಾವರಣ, ಗ್ರಂಥಗಳ ಲೋಕಾರ್ಪಣೆ, ಗುರುಕರುಣಾಮೃತ ವಚನಗಳ ಸಂಕಲನ ಬಿಡುಗಡೆ ಮಾತೃ ಹೃದಯ ಸ್ಮರಣ ಸಂಚಿಕೆ ಬಿಡುಗಡೆ, ಸಂಗೀತ ಭರತ ನಾಟ್ಯ, ನೃತ್ಯ, ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ, ತುಲಾಭಾರ, ಶ್ರೀಮಠದ ಹಾಲಿ ಮಾಜಿ ಯೋಧರಿಗೆ ಸನ್ಮಾನ ಕಾರ್ಯಕ್ರಮ, ಹಳೆಯ ವಿದ್ಯಾರ್ಥಿಗಳಿಗೆ ಶ್ರೀ ಗುರುರಕ್ಷೆ ಕಾರ್ಯಕ್ರಮ ಹಾಗೂ ಮನರಂಜನೆ ಕಾರ್ಯಕ್ರಮಗಳು ಎರಡು ದಿನಗಳ ಕಾಲ ಮುಂಜಾನೆಯಿಂದ ರಾತ್ರಿವರಿಗೂ ಈ ಎಲ್ಲಾ ಕಾರ್ಯಕ್ರಮಗಳು ಶ್ರೀ ನೀಲಕಂಠಾರ್ಯ ತಾತನವರು ಹಾಗೂ ಪರಮಪೂಜ್ಯ ಶ್ರೀ ದೊಡ್ಡಬಸವಾರ್ಯ ತಾತನವರ ನೇತೃತ್ವದಲ್ಲಿ ಜರುಗಲಿವೆ ಎಂದರು.

ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಲ್ಲಿ ಉಜ್ಜಯಿನಿ ಪೀಠದ ಸಿಂಹ ಶ್ರೀ ಜಗದ್ಗುರು ಡಾ. ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದ ಹಳೆಯ ವಿದ್ಯಾರ್ಥಿಗಳು ಪ್ರಸಾದ ನಿಲಯದ ಹಳೆಯ ವಿದ್ಯಾರ್ಥಿಗಳು ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಮಾಡಲು ಕೋರಿದರು.


[ays_poll id=3]