This is the title of the web page
This is the title of the web page
international News

ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್​ವಿಚ್ ತಯಾರಿಸಿ ಸವಿದ ಗಗನಯಾತ್ರಿ


K2 ನ್ಯೂಸ್ ಡೆಸ್ಕ್ : ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ನಡೆಸುವ ಜೀವನಶೈಲಿಯ ಬಗ್ಗೆ ಸಾಮಾನ್ಯರಿಗೆ ಕುತೂಹಲ ಇದ್ದೇ ಇರುತ್ತದೆ. ಅಂತ ಒಂದು ಕುತೂಹಲಕಾರಿ ವಿಡಿಯೋ ಇಲ್ಲಿದೆ.

ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕುತೂಹಲವನ್ನು ತಣಿಸುವ ಅಥವಾ ಹೆಚ್ಚಿಸುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಗಗನಯಾತ್ರಿಯೊಬ್ಬರು ಹನಿ ಸ್ಯಾಂಡ್​ವವಿಚ ಎಂಬ ಕ್ವಿಕ್ ಬ್ರೇಕ್​ಫಾಸ್ಟ್​ ತಯಾರಿಸಿಕೊಂಡಿದ್ದಾರೆ. ಯುಎಇ ಗಗನಯಾತ್ರಿ ಸುಲ್ತಾನ್​ ಅಲ್​ ನೆಯಾದಿ ಈ ಬ್ರೇಕ್​ಫಾಸ್ಟ್ ಅನ್ನು ತಯಾರಿಸಿದ್ದಲ್ಲದೆ ತಿನ್ನುವ ವಿಡಿಯೋ ಅನ್ನು ಕೂಡ X (Twitter) ನಲ್ಲಿ ಪೋಸ್ಟ್​ ಮಾಡಿದ್ದಾರೆ. ನೆಟ್ಟಿಗರು ಈ ವಿಡಿಯೋ ಅನ್ನು ಕುತೂಹಲದಿಂದ ನೋಡುತ್ತಿದ್ದಾರೆ ಮತ್ತು ಪ್ರತಿಕ್ರಿಯಿಸುತ್ತಿದ್ದಾರೆ.

ಗುರುತ್ವಾಕರ್ಷಣೆ ಇಲ್ಲದೆ ತೇಲುವ ಬ್ರೆಡ್​, ಮತ್ತು ಮೇಲ್ಮುಖವಾಗಿ ಚಿಮ್ಮಿ ಬ್ರೆಡ್ಡಿಗೆ ಅಂಟಿಕೊಳ್ಳುವ ಜೇನು, ತಯಾರಾದ ಸ್ಯಾಂಡ್ವಿಚ್​ ಅನ್ನು ತಿನ್ನುವ ನೆಯಾದಿ. ಈ ಸುಂದರವಾದ ದೃಶ್ಯ ಅನೇಕ ನೆಟ್ಟಿಗರನ್ನು ಬೆರಗಿಗೆ ತಳ್ಳಿದೆ. ಆ. 20ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 1.7 ಲಕ್ಷ ಜನರು ನೋಡಿದ್ದಾರೆ. 300ಕ್ಕೂ ಹೆಚ್ಚು ಜನರು ರೀಪೋಸ್ಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದು ನಿಜಕ್ಕೂ ಬಹಳ ಆಕರ್ಷಕವಾಗಿದೆ. ಇಂಥ ವಿಡಿಯೋಗಳನ್ನು ಹುಡುಕಿ ನೋಡುತ್ತೇವೆ, ಮಕ್ಕಳಿಗೂ ತೋರಿಸುತ್ತೇವೆ ಎಂದಿದ್ದಾರೆ ಕೆಲವರು. 42 ವರ್ಷದ ಗಗನಯಾತ್ರಿ ನೆಯಾದಿ ಆರು ತಿಂಗಳ ಸಂಶೋಧನೆಯನ್ನು ಮುಗಿಸಿ ಸೆ. 1ರಂದು ಭೂಮಿಗೆ ಮರಳಲಿದ್ದಾರೆ. ನಿಮ್ಮ ತೂಕ ಮೊದಲು ಎಷ್ಟಿತ್ತು ಈ ಆರುತಿಂಗಳಲ್ಲಿ ಎಷ್ಟಕ್ಕೆ ಇಳಿದಿದೆ ಎಂದು ಕೇಳಿದ್ದಾರೆ ಕೆಲವರು. ನೀವು ಜಗತ್ತಿನ ಒಳಿತಿಗಾಗಿ ಶ್ರಮಿಸುತ್ತಿದ್ದೀರಿ, ನಿಮ್ಮನ್ನು ನಾವು ಪ್ರೀತಿಸುತ್ತೇವೆ ಎಂದಿದ್ದಾರೆ ಅನೇಕರು.


[ays_poll id=3]