This is the title of the web page
This is the title of the web page
Crime NewsLocal News

ಯುವತಿ ಮೇಲೆ ಹಲ್ಲೆ ನಡೆಸಿ ಕೈಯಲ್ಲಿದ್ದ ಬ್ಯಾಗ್ ಕಿತ್ತುಯ್ದ ಖದೀಮ..


K2kannadanews.in

Crime News, ಮಸ್ಕಿ : ಬೆಳಗಿನ ಉಪಾಹಾರಕ್ಕೆಂದು (Brack fast) ದೇವಸ್ಥಾನದ (Temple) ಭೋಜನಾಲಯಕ್ಕೆ ತೆರಳಿದ್ದ ವೇಳೆ, ಯುವತಿ (women) ಮೇಲೆ ಹಲ್ಲೆ (attack) ನಡೆಸಿ, ಕೈಯಲ್ಲಿದ್ದ ಬ್ಯಾಗ್ (Bag) ಕಿತ್ತುಕೊಂಡು ಹೋದ ಘಟನೆ ಬೆಳಿಗ್ಗೆ ಪಟ್ಟಣದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಮಸ್ಕಿ (Maski) ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ (Bhrmaramba temple) ಏರ್ಪಡಿಸಿದ್ದ ಮದುವೆಗೆ ಆಗಮಿಸಿದ್ದ ಯುವತಿ ಮೇಲೆ ಹಲ್ಲೆ ನಡೆದಿದೆ. ರಾಯಚೂರಿನ ಕುಟುಂಬಸ್ಥರು ದೇವಸ್ಥಾನದ ಸಮೀಪದ ಯಾತ್ರಿ ನಿವಾಸದಲ್ಲಿ (guest house) ತಂಗಿದ್ದರು. ಬೆಳಗಿನ ಉಪಾಹಾರಕ್ಕೆಂದು ದೇವಸ್ಥಾನದ ಭೋಜನಾಲಯಕ್ಕೆ ತೆರಳಿದ್ದ 17 ವರ್ಷದ ಯುವತಿ ತನ್ನ ಬ್ಯಾಗ್ ತೆಗೆದುಕೊಂಡು ಹೋಗಲು ಕೊಠಡಿಗೆ ಬಂದಿದ್ದಳು.

ಈ ಸಂದರ್ಭದಲ್ಲಿ ಒಳನುಗ್ಗಿದ ಯುವಕನೊಬ್ಬ (young man) ಯುವತಿ ಮೇಲೆ ಹಲ್ಲೆ ನಡೆಸಿ, ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಂಡಿದ್ದಾನೆ. ಕೊರಳಲ್ಲಿನ ಚೈನ್ (chine) ಕಸಿದುಕೊಳ್ಳುವ ಯತ್ನ ನಡೆಸಿದಾಗ ಯುವತಿ ಕಿರುಚಾಡಿದ್ದಾಳೆ. ಅಷ್ಟರಲ್ಲಿ ಪಕ್ಕದ ಕೋಠಡಿಯಲ್ಲಿದ್ದ ಆಕೆಯ ಉಳಿದ ಸ್ನೇಹಿತೆಯರು (Friends) ನೆರವಿಗೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೆ ಯುವಕ ದೇವಸ್ಥಾನದ ಕಂಪೌಂಡ್ ಜಿಗಿದು (jump from compound) ಪರಾರಿಯಾಗಿದ್ದಾನೆ. ಕಳೆದ ಮೂರು ತಿಂಗಳಿಂದ ಯಾತ್ರಿ ನಿವಾಸದಲ್ಲಿ ತಂಗಿದವರ ಕಳ್ಳತನ ಮಾಡಿದ ಪ್ರಕರಣಗಳು ಹೆಚ್ಚಾಗಿವೆ. ಗುರುವಾರವಷ್ಟೇ ಬೆಲೆ ಬಾಳುವ ಎರಡು ಐಪೋನ್ ಕಳ್ಳತನ ಮಾಡಲಾಗಿದೆ. ಯುವತಿಯ ಸಂಬಂಧಿಕರು ಪೊಲೀಸರಿಗೆ ದೂರು ಕೊಟ್ಟಿದ್ದು, ಪೊಲೀಸರು ಸ್ಥಳಕ್ಕೆ ಬಂದ ಪರಿಶೀಲಿಸಿದರು.


[ays_poll id=3]