
ಲಿಂಗಸಗೂರು : ಬಿಸಿಎಂ ಹಾಸ್ಟೆಲ್ ವೀಕ್ಷಣೆಗೆ ತೆರಳಿದ್ದ ಹಿಂದುಳಿದ ಇಲಾಖೆಯ ಜೂನಿಯರ್ ವಾರ್ಡನ್ ಶರಣಪ್ಪ ಸಾಹುಕಾರ್ ಅವರ ಮೇಲೆ ಅಧಿಕಾರಿಗಳ ಎದುರೆ ಹಲ್ಲೆಮಾಡಿದ ಘಟನೆ ನಡೆದಿದೆ.
ಹೌದು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಈಚನಾಳ ಗ್ರಾಮದಲ್ಲಿ ಇರುವ, ಮಹಿಳಾ ಹಾಸ್ಟೆಲ್ ವೀಕ್ಷಣೆಗೆ ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ. ಲಿಂಗಸುಗೂರು ತಾಲೂಕು ಬಿಸಿಎಂ ಇಲಾಖೆ ಅಧಿಕಾರಿಗಳೊಂದಿಗೆ, ಶರಣಪ್ಪ ಸಾಹುಕಾರ್ ಬಿಸಿಎಂ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ತಪಾಸಣೆಗೆ ತೆರಲಿದ್ದಾರೆ. ಈ ವೇಳೆ ಅದೇ ಗ್ರಾಮದ ಮಲ್ಲರೆಡ್ಡಪ್ಪ ದೊಡ್ಡಮನಿ ತಪಾಸಣಾ ವೇಳೆ ಖ್ಯಾತೆ ತೆಗೆದಿದ್ದಾರೆ. ಅದನ್ನೇ ಕಾರಣವಾಗಿಟ್ಟುಕೊಂಡು, ವಿನಾಕಾರಣ ಅಧಿಕಾರಿಗಳ ಎದುರೇ ಶರಣಪ್ಪ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲೇ ಇದ ಅಧಿಕಾರಿಗಳು ಜಗಳ ಬಿಡಿಸಿದ್ದು, ಗಾಯಾಳು ಶರಣಪ್ಪ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನೂ ವಿನಾಕಾರಣ ಶರಣಪ್ಪ ಅವರು ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೆ, ಹಲ್ಲೆ ಮಾಡಿದ್ದು ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಭೀಮಣ್ಣನಾಯಕ ಒತ್ತಾಯಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]