
ರಾಯಚೂರು : ವಾರ್ಡ್ ನಂಬರ್ 21ರಲ್ಲಿ ಅನಧಿಕೃತವಾಗಿ ಹಾಡು ಹಗಲೇ ನಗರಸಭೆಯಿಂದ ಯಾವುದೇ ಪರವಾನಿಗೆ ಪಡೆಯದೆ ರೈಸಿಂಗ್ ಪೈಪ್ ನಿಂದ ಕಲೆಕ್ಷನ್ ತೆಗೆದುಕೊಳ್ಳುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ನಗರಸಭೆ ಪೌರಾಯುಕ್ತರು ಮತ್ತು ವಾರ್ಡ್ ನಂಬರ್ 21ರ ನಗರಸಭೆ ಸದಸ್ಯ ಎಂದು ವಾರ್ಡಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ವಾಸ್ತವಿಕವಾಗಿ ನಗರಸಭೆಯಿಂದ ವಾರ್ಡ್ ನಂಬರ್ 21ರ ಬೋಳಮಾನ ದೊಡ್ಡಿ ರಸ್ತೆಯಲ್ಲಿ ಇರುವಂತಹ ಆಶೀರ್ವಾದ ಬಡಾವಣೆಗೆ ನೀರಿನ ಸಂಪರ್ಕ ಒದಗಿಸಲು ಇನ್ನೂ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನವಾಗಿಲ್ಲ. ಆದರೆ ಇಲ್ಲಿ ಉಳ್ಳವರು, ಪ್ರಭಾವಿಗಳು ಯಾರದ್ದೇ ಭಯವಿಲ್ಲದೆ ಹಾಡುವಾಗಲೇ ಜೆಸಿಬಿಗಳ ಮೂಲಕ ರೈಸಿಂಗ್ ಪೈಪ್ ಲೈನ್ ಮೂಲಕ ಮನೆಗಳಿಗೆ ನಳದ ಸಂಪರ್ಕ ಪಡೆಯುತ್ತಿದ್ದಾರೆ. ಈ ಬಗ್ಗೆ ನಗರಸಭೆಗೆ ಮಾಹಿತಿ ನೀಡಲು ಹೋದರೆ ಪೌರಾಯುಕ್ತರಾಗಲಿ, ಇಂಜಿನಿಯರ್ ಗಳಾಗಲಿ ಯಾರು ಸಿಗುತ್ತಿಲ್ಲ, ನಗರಸಭೆ ಸದಸ್ಯರು ಇಷ್ಟೆಲ್ಲಾ ಆದರೂ ಕೂಡ ನನಗೆ ಗೊತ್ತಿಲ್ಲ ಎನ್ನುತ್ತಾರೆ ಎಂಬುದು ಸ್ಥಳೀಯರ ದೂರಾಗಿದೆ.
ಬಡಾವಣೆ ನಿವಾಸಿಗಳು ನಿಯಮ ಬದ್ಧವಾಗಿ ನೀರಿನ ಸಂಪರ್ಕ ಕೇಳಲು ಹೋದರೆ ಕೊಡಲು ಬರುವುದಿಲ್ಲ ಎಂಬ ಉತ್ತರ ನಗರಸಭೆ ಅಧಿಕಾರಿಗಳಿಂದ ಬರುತ್ತದೆ. ನಗರ ಸಭೆಗೆ ಸಾರ್ವಜನಿಕರು ದೂರು ನೀಡಲು ಹೋದರೆ ಪೌರಾಯುಕ್ತರು ಕಚೇರಿಯಲ್ಲಿ ಸಿಗುವುದೇ ಅಪರೂಪ, ನಗರ ಸಭೆ ಕಚೇರಿ ಕಟ್ಟಡ ಹುಡುಕಾಡಿದರು ಸಿಗುವುದಿಲ್ಲ. ಈ ಒಂದು ಬಡಾವಣೆಯ ನಗರಸಭೆ ಸದಸ್ಯ ನಾಗರಾಜ್ ಅವರಿಗೆ ಕೇಳಿದರೆ, ಅಲ್ಲಿ ಯಾವುದೇ ರೀತಿಯಾದಂತಹ ನಳದ ಕಲೆಕ್ಷನ್ ಕೊಡಲು ಅವಕಾಶ ಇಲ್ಲ ಎನ್ನುತ್ತಾರೆ. ಇನ್ನು ಹೀಗೆ ಅನಧಿಕೃತವಾಗಿ ಪೈಪ್ಲೈನ್ ಹಾಕಲಾಗುತ್ತಿದೆ ಎಂಬ ಮಾಹಿತಿ ನೀಡಿದರೆ ನನಗೆ ಆ ಬಗ್ಗೆ ಗೊತ್ತಿಲ್ಲ ಎಂಬ ಉತ್ತರ ನೀಡುತ್ತಾರೆ ಎನ್ನುವುದು ಸ್ಥಳೀಯರ ಅಸಮಾಧಾನವಾಗಿದೆ.
ಈ ಬಗ್ಗೆ k2 ಕನ್ನಡ ನ್ಯೂಸ್ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ನಗರ ಸಭೆಗೆ ಮಾಹಿತಿ ನೀಡದೆ ಅಲ್ಲಿ ಅಕ್ರಮವಾಗಿ ನೀರಿನ ಸಂಪರ್ಕ ಪಡೆಯಲಾಗುತ್ತಿದ್ದು, ಈ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ಕ್ರಮ ಕೈಗೊಂಡು ಕಾಮಗಾರಿಯನ್ನ ನಿಲ್ಲಿಸಿದ್ದೇವೆ ಎನ್ನುತ್ತಾರೆ ಪೌರಾಯುಕ್ತರಾದ ಗುರುಲಿಂಗಪ್ಪ. ಆದರೆ ಇದಕ್ಕೆ ಕ್ರಮ ಏನು ಎಂದು ಕೇಳಿದರೆ ಅವರಿಂದ ಉತ್ತರ ಸಿಗುತ್ತಿಲ್ಲ.
![]() |
![]() |
![]() |
![]() |
![]() |
[ays_poll id=3]