K2 Kannada news
ನ್ಯೂಸ್ ಡೆಸ್ಕ್ : ಬ್ಯಾಂಕ್ ಖಾತೆ ಮಾಡಿಸಲು ನೀವು ಓಡಾಡುತ್ತಿದ್ದರೇ ಎಚ್ಚರ.. ನಕಲಿ ಬ್ಯಾಂಕ್ ಖಾತೆ(Fake bank account) ಸೃಷ್ಟಿಸಿ ವಹಿವಾಟು (transactions) ಮಾಡುತಿದ್ದ ಬೃಹತ್ ಜಾಲವನ್ನು ಸೈಬರ್ ಕ್ರೈಂ ಪೊಲೀಸರು(Cyber Crime) ಪತ್ತೆ ಹಚ್ಚಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ.
ಸ್ನೇಹಿತನಂತೆ(Friend) ನಿಮಗೆ ಪರಿಚಯವಾಗಿ ನಿಮ್ಮ ಬಳಿ ಬಳಿ ಆಧಾರ್(adhar), ಬ್ಯಾಂಕ್ ಖಾತೆ, ಪಾನ್ ಕಾರ್ಡ್(pan card) ಮಾಹಿತಿ ಪಡೆದು 10 ಸಾವಿರದ ವರೆಗೆ ನಿಮಗೆ ಹಣ ನೀಡಿ ನಂತರ ಖದೀಮರು ಬೇನಾಮಿ ಖಾತೆ ಸೃಷ್ಠಿಸಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದರು. ಇಂತದ್ದೆ ಒಂದು ಬೃಹತ್ ಜಾಲವಲ್ಲ ಪತ್ತೆಹಚ್ಚಲಾಗಿದೆ. ಇವರು 5, 10 ಸಾವಿರದ ವರೆಗೆ ಹಣ ನೀಡಿ ಜನರಿಂದ ಮಾಹಿತಿ ಪಡೆದು, ನಂತರ ಈ ಗ್ಯಾಂಗ್ ದುಬೈನಲ್ಲಿರುವ(Dubai) ಕಿಂಗ್ಪಿನ್ಗೆ(king pin) ಮಾಹಿತಿ ರವಾನಿಸುತ್ತಿದ್ದರು. ಪ್ರತಿ ದಾಖಲಾತಿಗೆ ಹೊಸ ಸಿಮ್ ಕಾರ್ಡ್(sim card) ಬಳಸುತ್ತಿದ್ದರು.
ಇತ್ತೀಚೆಗೆ ಮಂಜೇಶ್ ಎಂಬಾತ ಸ್ನೇಹಿತ ಜೊತೆ ಮತ್ತಿಕೇರಿಯ ಮನೆ ಕಂ ಕಚೇರಿಗೆ(home co Office) ಬಂದಿದ್ದು ಇಲ್ಲಿ ಆತನ ಸ್ನೇಹಿತ 10 ಸಾವಿರ ರೂ ಕೊಡುತ್ತಾರೆ, ನಿನ್ನ ದಾಖಲೆ ಕೊಡು ಎಂದಿದ್ದಾನೆ. ಕಚೇರಿಯಲ್ಲಿರುವ ದಾಖಲೆ, ಬ್ಯಾಂಕ್ ಪುಸ್ತಕಗಳನ್ನು ಕಂಡು ಹೆದರಿದ ಮಂಜೇಶ್(manjesh) ನೇರವಾಗಿ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ, ಈ ಬೃಹತ್ ಬೇನಾಮಿ ಖಾತೆ ಸೃಷ್ಟಿಸುವ ಗ್ಯಾಂಗ್ ಪತ್ತೆ ಮಾಡಿದ್ದಾರೆ. ದುಬೈನಲ್ಲಿ ಕುಳಿತಿರುವ ಬಾಸ್(boss) ಅಣತಿ ಮೇರೆಗೆ ಬೆಂಗಳೂರಿನಲ್ಲಿ(bengloru) ಎಲ್ಲಾ ಕೃತ್ಯಗಳು ನಡೆಯುತ್ತಿದ್ದರು. ಪ್ರಕರಣ ಸಂಬಂಧ ಕೇರಳ ಮೂಲದ ಆರೋಪಿಗಳಾದ(accused) ಸಮೀರ್, ಅಮೂಲ ಬಾಬು, ಮಂಜುನಾಥ್, ಮಹಮ್ಮದ್ ಹಸನ್, ಮಹಮ್ಮದ್ ಇರ್ಫಾನ್, ತಂಝೀಲ್ ಎಂಬುವವರನ್ನು ಬಂಧಿಸಲಾಗಿದೆ.
ಈ ಮೂಲಕ K2ಕನ್ನಡ ನ್ಯೂಸ್(kannada news) ಮನವಿ ಏನೆಂದರೇ, ಯಾರಾದರೂ ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಖಾತೆ ಮಾಹಿತಿ ಕೇಳಿದ್ದಲ್ಲಿ ಸರಿಯಾಗಿ ಕಾರಣ ತಿಳಿದುಕೊಳ್ಳದೇ ಮಾಹಿತಿ ನೀಡಬೇಡಿ, ನಿಮ್ಮ ಹೆಸರಲ್ಲೂ ಬೇನಾಮಿ ಖಾತೆ ಸೃಷ್ಟಿಯಾಗಬಹುದು.
[ays_poll id=3]