
ರಾಯಚೂರು : ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಜೈಲಿನಲ್ಲಿದ್ದ, ಖೈದಿಯೊಬ್ಬ ಬೆಳ್ಳಂ ಬೆಳಗ್ಗೆ ಪರಾರಿಯಾದ ಘಟನೆ ದೇವದುರ್ಗದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ಸಬ್ ಜೈಲಿನಿಂದ ಖೈದಿ ಪರಾರಿಯಾಗಿದ್ದು, ಗಬ್ಬೂರು ಠಾಣೆಯಲ್ಲಿ 302, 201 ಕಲಂ ನಲ್ಲಿ ಬಂಧಿತನಾಗಿದ್ದ ಖೈದಿ, ಅನ್ವರಬಾಷಾ ಜೈಲಿನಿಂದ ಪರಾರಿಯಾದ್ದಾನೆ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ಅನ್ವರಬಾಷಾ, ವಿಜಯನಗರ ಜಿಲ್ಲೆಯ ರಾಮನಗರ ನಿವಾಸಿ.
ಇಂದು ಬೆಳಗ್ಗೆ 7 ಗಂಟೆಗೆ ದೇವದುರ್ಗ ಸಬ್ ಜೈಲಿನಿಂದ, ಟಿಫಿನ್ ಮಾಡುವ ನೆಪದಲ್ಲಿ ಭದ್ರತಾ ಸಿಬ್ಬಂದಿ ಜತೆ ಹೊರಗೆ ಬಂದಿದ್ದ ಎಂದು ಹೇಳಲಾಗುತ್ತಿದ್ದು, ಈ ವೇಳೆ ಸಿಬ್ಬಂದಿಗಳಿಗೆ ಯಾಮಾರಿಸಿ ತಪ್ಪಿಸಿಕೊಂಡಿದ್ದಾನೆ. ತಪ್ಪಿಸಿಕೊಂಡ ಅನ್ವರ್ ಭಾಷೆಯಾಗಿ ಜೈಲಿನ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]