This is the title of the web page
This is the title of the web page
Local News

ಎ.ಎ.ಪಿ.ಅಭ್ಯರ್ಥಿ ಡಾ.ಸುಭಾಷ್ ಅವರಿಗೆ ಗಡಿ ಗ್ರಾಮಗಳಲ್ಲಿ ಅದ್ದೂರಿ ಸ್ವಾಗತ


ರಾಯಚೂರು : ರಾಯಚೂರು ಗ್ರಾಮೀಣ ಮತ ಕ್ಷೇತ್ರದ ಗಡಿ ಗ್ರಾಮಗಳಿಗೆ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಡಾ. ಸುಭಾಷ್ ಚಂದ್ರ ಸಂಬಾಜಿ ಅವರಿಗೆ ಕಳಸ ಡೊಳ್ಳಿನೊಂದಿಗೆ ಭರ್ಜರಿ ಮತ್ತು ಕಾರ್ಯಕರ್ತರು ಸ್ವಾಗತಿಸಿದರು.

2023ರ ವಿಧಾನ ಸಭೆ ಚುನಾವಣೆ ಅಂಗವಾಗಿ ಎ.ಎ.ಪಿ.ಅಭ್ಯರ್ಥಿ ಡಾ.ಸುಭಾಷ್ ಚಂದ್ರ ಸಂಬಾಜಿ ಅವರು ಗಡಿ ಭಾಗದ ಹಳ್ಳಿಗಳಾದ ಬುಡದಿನ್ನಿ .ಗಿಲ್ಲೇಸೂಗೂರು. ತುಂಗಭದ್ರಾ ಗ್ರಾಮಗಳಿಗೆ ತೆರಳಿದರು ಅದ್ದೂರಿಯಾಗಿ ಸ್ವಾಗತಿಸಿ ಬೆಂಬಲ ಸೂಚಿಸಿದರು. ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡುತ್ತಾ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲ ಮುನ್ನಾ ಮಾಡಲಾಗುತ್ತದೆ ಎರಡು ನದಿಗಳ ಮಧ್ಯ ಗ್ರಾಮೀಣ ಕ್ಷೇತ್ರವಿದ್ದರು ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಜೊತೆಗೆ ಉತ್ತಮ ಶಿಕ್ಷಣ ವ್ಯವಸ್ಥೆ ನೀಡಲಾಗುತ್ತದೆ ಎಂದರು. ನಾನು ಶಾಸಕನಾಗಿ ಅರಿಸಿ ಬಂದರೆ ಪಕ್ಷದ ಬೆಂಬಲದೊಂದಿಗೆ ರಾಯಚೂರು ತಾಲೂಕು ಸಂಪೂರ್ಣ ನೀರಾವರಿ ಮಾಡುತ್ತಿವೆಂದು ಡಾ.ಸುಭಾಷ್ ಚಂದ್ರ ಸಂಬಾಜಿ ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎ.ಎ.ಪಿ.ಮುಖಂಡರಾದ ಕೆ.ಬಸವಂತಪ್ಪ .ರತ್ನಾಕರ್. ಸುಗಪ್ಪ ಲಕ್ಷ್ಮಣ ಭಜಂತ್ರಿ ಕರೆಮ್ಮ .ಶಾಂತಮ್ಮ. ಹಾಗೂ ನೂರಾರು ಯುವಕರು .ಯುವತಿಯರು. ಮಹಿಳೆಯರು
ಮುಂತಾದವರು ಭಾಗವಹಿಸಿದ್ದರು


[ays_poll id=3]