3ನೇ ಮಹಡಿಯಿಂದ ತಂದೆ ತೋಳಿನಲ್ಲಿದ್ದ ಮಗು, ಕೈ ಜಾರಿ ಬಿದ್ದು ಸಾವು ಎದೆ ಝಲ್ ಎನಿಸೋ ವೀಡಿಯೋ..!
K2kannadanews.in
Crime News : ಪಾಲಕರೇ ಮಕ್ಕಳನ್ನು ಎತ್ತಿಕೊಂಡು ಶಾಪಿಂಗ್ ಮಾಲ್ ಹೋದಾಗ ಎಚ್ಚರವಿರಲಿ. ಕಾರಣ ಶಾಪಿಂಗ್ ಮಾಲ್ನ ಮೂರನೇ ಮಹಡಿಯಲ್ಲಿ ಎಸ್ಕಲೇಟರ್ ಹತ್ತುವಾಗ ತಂದೆಯ ಕೈಯಿಂದ ಒಂದು ವರ್ಷದ ಮಗು ಜಾರಿ 40 ಅಡಿಗಳಷ್ಟು ಕೆಳಗೆ ಬಿದ್ದಿರುವ ಹೃದಯ ವಿದ್ರಾವಕ ಘಟನೆ ನಡೆದು ಮಗು ಮೃತಪಟ್ಟಿದೆ.
ಹೌದು ಮಂಗಳವಾರ ತಡರಾತ್ರಿ ಛತ್ತೀಸ್ಗಢದ ರಾಜಧಾನಿ ರಾಯ್ಪುರದ ಮಾಲ್ನಲ್ಲಿ ನಡೆದಿದೆ. ಸುಮಾರು ಮೂರನೆ ಮಹಡಿಯಿಂದ ಮಗು ಬಿದ್ದಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ. ವ್ಯಕ್ತಿ ಒಂದು ಕೈಯಲ್ಲಿ 5ವರ್ಷದ ಮಗುವನ್ನು ಮತ್ತು ಮತ್ತೊಂದು ತೋಳಿನಲ್ಲಿ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಎಸ್ಕಿಲೇಟರ್ ಬಳಿ ಬರುತ್ತಿರುವುದು ಸೆರೆಯಾಗಿದೆ.
रायपुर के सिटी सेंटर मॉल में दिलदहला देने वाली घटना
एस्केलेटर चढ़ते परिजन के हाथ से छूटा बच्चा
तीसरे माले से गिरने से मासूम की मौत#raipur #citycentremall#mall #RaipurNews#pandri pic.twitter.com/6HW3IsgsBX— Ammar raza (@Ammarra70427353) March 19, 2024
ಎಸ್ಕಿಲೇಟರ್ ಹತ್ತಲುಹತ್ತುವ ವೇಳೆ 5ವರ್ಷದ ಮಗು ಕಷ್ಟಪಡುತ್ತಿದ್ದು, ಈ ವೇಳೆ ಅಪ್ಪ ಸಹಾಯಕ್ಕೆ ಮುಂದಾಗಿದ್ದಾರೆ, ಈ ವೆಳೆ ಆಕಸ್ಮಿಕವಾಗಿ ತೋಳಿನಲ್ಲಿದ್ದ ಒಂದು ವರ್ಷದ ಮಗು ಕೈಯಿಂದ ಜಾರಿ ಬಿದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗುವನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಸ್ಥಳೀಯ ಸುದ್ದಿ ವರದಿಗಳು ತಿಳಿಸಿವೆ. ದೇವೇಂದ್ರ ನಗರ ಪೊಲೀಸರು ಪ್ರಸ್ತುತ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದು,
[ays_poll id=3]