ರಾಯಚೂರು : ವೀರೇಶ ಕಂಬಯ್ಯಗಾರ್ ನಿರ್ದೇಶಸಿ ನಟಿಸಿರುವ ಸ್ವಪ್ನಲೋಕ ಚಲನಚಿತ್ರವು ನವೆಂಬರ್ 24 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ನಟ ವೀರೇಶ ಕಂಬಯ್ಯಗಾರ್ ಹೇಳಿದರು.
ಸ್ವಪ್ನಲೋಕ ಚಲನಚಿತ್ರವು ನಾಳೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರವು ರಾಯಚೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ ಎಂದ ಅವರು ಬಹುತೇಕ ಶೇಕಡ 90 ರಷ್ಟು ರಾಯಚೂರು ಕಲಾವಿದರೆ ನಟಿಸಿದ್ದಾರೆ. ನಾಲ್ಕು ಹಾಡುಗಳನ್ನು ಹೊಂದಿರುವಂತಹ ಚಿತ್ರ ಉತ್ತಮ ಸಂಗೀತವನ್ನು ಹೊಂದಿದೆ. 13 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಒಂದು ಚಿತ್ರ ನಿರ್ಮಾಣವಾಗಿದ್ದು, ಕಡಿಮೆ ವೆಚ್ಚದಲ್ಲಿ ಉತ್ತಮ ಚಿತ್ರ ನಿರ್ಮಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇವೆ ಎಂದು ನಿರ್ಮಾಪಕರು ಹೇಳುತ್ತಾರೆ.
ಉತ್ತಮ ಕಥೆಯನ್ನು ಹೊಂದಿರುವಂತಹ ಸಪ್ನ ಲೋಕ ಚಿತ್ರ ಪ್ರೇಕ್ಷಕರನ್ನ ಸಂತೃಪ್ತಿಗೊಳಿಸುತ್ತದೆ ಎಂಬ ನಂಬಿಕೆ ನಮಗಿದೆ. ಆದ್ದರಿಂದ ಕಲ್ಯಾಣ ಕರ್ನಾಟಕ ಜನರು ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
[ays_poll id=3]