This is the title of the web page
This is the title of the web page
Education News

ವರ್ಗಾವಣೆಯಾದ ಶಿಕ್ಷಕರು 981, ಜಿಲ್ಲೆಗೆ ಬಂದವರು 5 ಶಿಕ್ಷಕರು


K2 ನ್ಯೂಸ್ ಡೆಸ್ಕ್ : ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಮುಕ್ತಾಯವಾಗಿದ್ದು, ಜಿಲ್ಲೆಗೆ ಹೊರ ಜಿಲ್ಲೆಗಳಿಂದ ಬರಲು ಶಿಕ್ಷಕರು ಹಿಂದೇಟು ಹಾಕಿದ್ದಾರೆ. ಈಗಾಗಲೇ ಶಿಕ್ಷಕರ ಕೊರತೆ ಕಾಡುತ್ತಿರುವ ಜಿಲ್ಲೆಗೆ ವರ್ಗಾವಣೆಯಿಂದ ಮತ್ತಷ್ಟು ಶಿಕ್ಷಕರ ಕೊರತೆ ಎದುರಾಗಿದೆ. ರಾಯಚೂರು ಜಿಲ್ಲೆಯಿಂದ 981 ಶಿಕ್ಷಕರು ವರ್ಗಾವಣೆಯಾದರೆ ಜಿಲ್ಲೆಗೆ ಬಂದಿದ್ದು ಕೇವಲ ಐದು ಶಿಕ್ಷಕರು.

ಇನ್ನು ಕಲ್ಯಾಣ ಕರ್ನಾಟಕ ಭಾಗದ ಒಂದು ಗತಿಯು ಇದೆ ಆಗಿದೆ. ಕಲಬುರಗಿ ವಿಭಾಗದಿಂದ 2,504 ಶಿಕ್ಷಕರು ಬೇರೆ ವಿಭಾಗಗಳಿಗೆ ವರ್ಗಾವಣೆಯಾಗಿದ್ದಾರೆ, ಈ ವಿಭಾಗಕ್ಕೆ ಕೇವಲ 74 ಶಿಕ್ಷಕರು ಬಂದಿದ್ದಾರೆ.‌ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹೊರಗೆ ವರ್ಗಾವಣೆಗಾಗಿ ಇತರೆ ಅರ್ಹತೆಗಳ ಜತೆಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ, ಕನಿಷ್ಠ 10 ವರ್ಷ ನಿರಂತರವಾಗಿ ಸೇವೆ ಸಲ್ಲಿಸಿರಬೇಕು ಎಂಬ ನಿಯಮದಡಿ ಸಾವಿರಾರು ಶಿಕ್ಷಕರು ಅರ್ಹರಾಗಿದ್ದಾರೆ. ಶೇ25ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳಿರುವ ಶೈಕ್ಷಣಿಕ ಘಟಕಗಳಲ್ಲಿ ಶಿಕ್ಷಕರ ವರ್ಗಾವಣೆಗೂ ಅನುಮತಿಸಲಾಗಿದೆ.

ರಾಯಚೂರು 5,335, ಯಾದಗಿರಿ 3,917, ಕಲಬುರಗಿ 3,463, ಬಳ್ಳಾರಿ 2,450 ಮತ್ತು ಬೀದರ್‌ 1,469 ಅಧಿಕ ಶಿಕ್ಷಕರ ಕೊರತೆ ಇರುವ ಜಿಲ್ಲೆಗಳು. ಈ ಐದು ಜಿಲ್ಲೆಗಳ ಪೈಕಿ ಬೀದರ್ ಹೊರತರುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮೂರಂಕಿಯಷ್ಟು ಶಿಕ್ಷಕರು ವರ್ಗವಾಗಿದ್ದು, ಎರಡಂಕಿಯಷ್ಟೂ ಶಿಕ್ಷಕರು ಬಂದಿಲ್ಲ. ಬಳ್ಳಾರಿ 172 ನಾಲ್ವರು, ಬೀದರ್‌ 21 ಎಂಟು, ಕಲಬುರಗಿ 330  ಒಂಬತ್ತು, ರಾಯಚೂರಿ 981 ನಾಲ್ಕು ಹಾಗೂ ಯಾದಗಿರಿಯಲ್ಲಿ459 ಐದು ಶಿಕ್ಷಕರು ಹೊರ ವಿಭಾಗಗಳಿಂದ ಬಂದಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.


[ays_poll id=3]