This is the title of the web page
This is the title of the web page
Crime NewsState News

ದೇವದುರ್ಗ ಶಾಸಕರಿಂದ ರಕ್ಷಣೆ ಕೋರಿ 59 ಪೇದೆಗಳು SP ಮೊರೆ..


K2kannadanews.in

constables appeal to SP ರಾಯಚೂರು : ಶಾಸಕಿ ಕರೆಮ್ಮ ಪುತ್ರನಿಂದ ಪೇದೆ‌ ಮೇಲೆ ಹಲ್ಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ (twist) ಪಡೆದುಕೊಂಡಿದ್ದು, ಶಾಸಕರಿಂದ ರಕ್ಷಣೆ (security) ಕೋರಿ 59 ಪೊಲೀಸರ ಒಕ್ಕೊರಲಿನ ಎಸ್ಪಿಗೆ (SP) ಮನವಿ ಸಲ್ಲಿಸಿದ ಘಟನೆ ನಡೆದಿದೆ.

ದೇವದುರ್ಗ(Devadurga) ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ (Law and order) ವಿಭಾಗದ 36 ಹಾಗೂ ಸಂಚಾರಿ ಠಾಣೆಯ (Traffic police) 23 CHC, PC ಗಳು ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಅವರಿಂದ ರಕ್ಷಣೆ ಮಾಡುವಂತೆ ರಾಯಚೂರು ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರಿಗೆ ಮನವಿ (request) ಸಲ್ಲಿಸಿದ್ದಾರೆ. ತಾಲ್ಲೂಕಿನಲ್ಲಿ ಜೂಜಾಟ, ಅಕ್ರಮ ಮರಳು (illegal sand) ದಂಧೆ, ಇಸ್ಪೀಟ್, ಮಟಗಾ, ಕೋಳಿ ಪಂದ್ಯ, ಐಎಂವಿ, ಡಿಡಿ ಪ್ರಕರಣಗಳಲ್ಲಿ ರೇಡ್ ಮಾಡಿದಾಗ, ನಮ್ಮ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡ್ತಾರೆ.

ಯಾರನ್ನೇ ಹಿಡಿದುಕೊಂಡು ಬಂದರೂ ನಮ್ಮನ್ನು ಕೇಳಿ ಹಿಡಿದುಕೊಂಡು ಬರಬೇಕು ಎಂಬ ದಬ್ಬಾಳಿಕೆ (Oppression) ಮಾಡ್ತಾರೆ, ಪ್ರಕರಣ ದಾಖಲಿಸುವಾಗ ನಮ್ಮ ಬೆಂಬಲಿಗರು(supporter) ಹೌದೋ ಅಲ್ಲವೋ ಎಂದು ಖಚಿತಪಡಿಸಬೇಕು ಎನ್ನುತ್ತಾರೆ ಎಂದು ದಬ್ಬಾಳಿಕೆ ಮಾಡ್ತಾರೆ ಎಂಬ ಆರೋಪ (aligation) ಮಾಡಿದ್ದಾರೆ. ಕರೆಮ್ಮ ನಾಯಕ್ ವರ್ತನೆಯಿಂದ ನೈತಿಕ ಸ್ಥೈರ್ಯ ಕುಸಿದು, ಮಾನಸಿಕ (mentally) ಯಾತನೆ ಅನುಭವಿಸುತ್ತಿದ್ದೇವೆ. ಜೀವದ ಭಯದಲ್ಲಿ ನಾವು ಜೀವಿಸುವಂತಾಗಿದೆ. ಒಂದು ವೇಳೆ ರಾಜಕೀಯ ಹಸ್ತಕ್ಷೇಪದಿಂದ ಪೊಲೀಸ್ ಸಿಬ್ಬಂದಿ ವರ್ಗಾವಣೆ ಅಥವಾ ಅಮಾನತ್ತು ಆದರೆ ನಮ್ಮ ಕುಟುಂಬ ಆತಂಕಕ್ಕೆ ಒಳಗಾಗಿ ಮಾನಸಿಕ ಖಿನ್ನತೆಗೆ ಒಳಗಾಗುವ ಸ್ಥಿತಿ ಬಂದಿದೆ. ಒಂದು ವೇಳೆ ಶಿಸ್ತುಕ್ರಮ ಜರುಗಿಸುವುದಾದರೆ ದೇವದುರ್ಗ ಠಾಣೆಯ ಎಲ್ಲಾ ಸಿಬ್ಬಂದಿಗಳ ಸಾಮೂಹಿಕ ವರ್ಗಾವಣೆ ಮಾಡುವಂತೆ ಮನವಿ ಸಲ್ಲೊಸಿದ್ದಾರೆ.


[ays_poll id=3]