This is the title of the web page
This is the title of the web page
Crime NewsNational News

ಸೇಫ್ಟಿಪಿನ್‌ ನುಂಗಿದ್ದ 5 ತಿಂಗಳ ಮಗು : ಮುಂದಾಗಿದ್ದೇ ಬೇರೆ..?


K2 ಕ್ರೈಂ ಶ್ವಾಸನಾಳದಲ್ಲಿ ಸಿಲುಕಿದ್ದ ಸೇಫ್ಟಿ ಪಿನ್‌ ಅನ್ನು ಹೊರೆತೆಗೆದು ಐದು ತಿಂಗಳ ಗಂಡು ಮಗುವಿನ ಪ್ರಾಣವನ್ನು ರಕ್ಷಿಸುವಲ್ಲಿ ವೈದ್ಯರು ಯಶಸ್ವಿಯಾದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

ಹೂಗ್ಲಿಯ ಜಂಗಿಪಾರಾ ಮೂಲದ ಮಗು 5 ದಿನಗಳ ಹಿಂದೆ ಆಕಸ್ಮಿಕವಾಗಿ ಒಂದು ಇಂಚಿನ ಸೇಫ್ಟಿ ಪಿನ್ ಅನ್ನು ನುಂಗಿತ್ತು. ಅದಾದ ಬಳಿಕ, ಆ ಮಗುಗೆ ಉಸಿರಾಟದ ತೊಂದರೆ ಪ್ರಾರಂಭವಾಗಿದೆ. ಇದರಿಂದಾಗಿ ಹೆತ್ತವರು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ಅಲ್ಲಿನ ವೈದ್ಯರು ಮಗುವಿಗೆ ಶೀತವಿದೆ ಎಂದು ಊಹಿಸಿ, ಅದಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಆದರೆ ಮಗು ನಿರಂತರವಾಗಿ ಜೊಲ್ಲು ಸುರಿಸಲಾರಂಭಿಸಿತ್ತು, ಜೊತೆಗೆ ಸರಿಯಾಗಿ ತಿನ್ನದ ಕಾರಣ ಕುಟುಂಬಸ್ಥರು ಆತಂಕಕ್ಕೊಳಗಾದರು.

ಹೀಗಾಗಿ ಮಗುವನ್ನು ಕೋಲ್ಕತ್ತಾದ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ಈ ವೇಳೆ ಇಎನ್‌ಟಿ ವಿಭಾಗದ ವೈದ್ಯ ಸುದೀಪ್ ದಾಸ್ ಎಕ್ಸ್-ರೇ ಮಾಡಿ ಮಗುವಿನ ಶ್ವಾಸನಾಳದಲ್ಲಿ ಸೇಫ್ಟಿ ಪಿನ್ ಇರುವುದನ್ನು ಕಂಡುಹಿಡಿದರು. ಇದರ ಬೆನ್ನಲ್ಲೇ ಮಗುವಿಗೆ ಆಪರೇಷನ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಸತತ 40 ನಿಮಿಷಗಳ ಆಪರೇಷನ್‌ ನಂತರ ವೈದ್ಯರು ಶ್ವಾಸನಾಳದಿಂದ ಸೇಫ್ಟಿ ಪಿನ್ ಅನ್ನು ಯಶಸ್ವಿಯಾಗಿ ತೆಗೆದುಹಾಕಿದರು. ಸದ್ಯ ಮಗು ಸಂಪೂರ್ಣ ಆರೋಗ್ಯವಾಗಿದೆ.


[ays_poll id=3]