This is the title of the web page
This is the title of the web page
Local News

ಒಡಿಶಾಗೆ ಮರಳಿದ 30 ಕಾರ್ಮಿಕರು : ಆಗಿದ್ದಾದ್ರು ಏನು..?


K2kannadanews.in

ರಾಯಚೂರು : ಇಟ್ಟಂಗಿ ಭಟ್ಟಿಯಲ್ಲಿ(bricks factory) ಕೆಲಸಕ್ಕೆ ಬಂದು ಆರ್ಥಕ ಸಮಸ್ಯೆಗೆ (money problem) ಗುರಿಯಾಗಿ ತೊಂದರೆ ಅನುಭವಿಸುತ್ತಿದ್ದ ಒಡಿಶಾ(odisha) ಮೂಲದ ಕಾರ್ಮಿಕರನ್ನು ತಾಲ್ಲೂಕು ಆಡಳಿತದ ವತಿಯಿಂದ ಅವರನ್ನು ಸ್ವಗ್ರಾಮಕ್ಕೆ ಕಳುಹಿಸಲಾಯಿತು.

ಹೌದು ರಾಯಚೂರು(Raichur) ತಾಲ್ಲೂಕಿನ ಶಾಖವಾದಿ(shakavadi) ಗ್ರಾಮದ ಬಳಿ ಇರುವ ಇಟ್ಟಂಗಿ ಭಟ್ಟಿಗೆ 30 ಜನ ಕಾರ್ಮಿಕರು(labor) ಕೆಲಸ ಹರಸಿ ಬಂದಿದ್ದರು. ಆದರೆ ಸ್ಥಳೀಯ ವಾತಾವರಣ (environment) ಮತ್ತು ಕೆಲಸದ ಒತ್ತಡ(stress) ತಡೆಯಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದರು. ತದನಂತರ ಆರ್ಥಿಕ ಸಮಸ್ಯೆ ಎದುರಾಗಿ ತೊಂದರೆ ಅನುಭವಿಸುತ್ತಿದ್ದರು. ಕಾರ್ಮಿಕರ ಸಮಸ್ಯೆ ಸಹಾಯಕ ಆಯುಕ್ತೆ(AC) ಮೆಹಬೂಬಿ ಗಮನಕ್ಕೆ ತರಲಾಯಿತು.

ನಂತರ ಸಹಾಯಕ ಆಯುಕ್ತರು, ತಹಶಿಲ್ದಾರ (Tehsildar) ಸುರೇಶ ವರ್ಮ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ(child labor officer) ಮಂಜುನಾಥರೆಡ್ಡಿ, ಕಾರ್ಮಿಕ ನಿರೀಕ್ಷಕ(labor officer) ಶಾಂತಮೂರ್ತಿ, ಗ್ರಾಮೀಣ ಪಿಎಸ್‍ಐ(rural psi) ಪ್ರಕಾಶ ಡಂಬಳ್, ರೈಲ್ವೆ ಪೊಲೀಸ್ ಅಧಿಕಾರಿ ಪ್ರಶಾಂತಕುಮಾರ, ಕಂದಾಯ ನಿರೀಕ್ಷಕ ರಾಮು, ಗ್ರಾಮ ಆಡಳಿತಾಧಿಕಾರಿ ಬಾಬು, ರಂಗಬಸವರಾಜ ನೇತೃತ್ವದಲ್ಲಿ 30 ಕಾರ್ಮಿಕರನ್ನು ಕರತಂದು ಅವರಿಗೆ ಟಿಕೆಟ್ ತೆಗೆಸುವ ಮೂಲಕ ಕಾರ್ಮಿಕರನ್ನು ಒಡಿಶಾಕ್ಕೆ ಕಳುಹಿಸಲಾಯಿತು.


[ays_poll id=3]