This is the title of the web page
This is the title of the web page
Crime News

215 ಸರ್ಕಾರಿ ನೌಕರರಿಂದ ಆದಿವಾಸಿಗಳ ಮೇಲೆ ಅತ್ಯಾಚಾರ : ಶಿಕ್ಷೆ ಖಾಯಂ


K2 ನ್ಯೂಸ್ ಡೆಸ್ಕ್ : ವಾಚಾತಿ ಎಂಬ ಗ್ರಾಮಕ್ಕೆ ನುಗ್ಗಿ ಆದಿವಾಸಿ ಬಾಲಕಿಯರು ಮತ್ತು ಯುವತಿಯರ ಮೇಲೆ ಅತ್ಯಾಚಾರವೆಸಗಿದ್ದ 215 ಮಂದಿ ಪೊಲೀಸ್, ಕಂದಾಯ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗೆ ಶಿಕ್ಷೆ ಖಾಯಂ ಆಗಿದೆ.

126 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ, 84 ಪೊಲೀಸ್‌ ಇಲಾಖೆ ಸಿಬ್ಬಂದಿ ಹಾಗೂ 5 ಕಂದಾಐ ಅಧಿಕಾರಿಗಳು 20 ವರ್ಷದ ಹಿಂದೆ ಶ್ರೀಗಂಧ ಕಳ್ಳಸಾಗಣೆ ಶಂಕೆಯ ಮೇಲೆ ವಾಚಾತಿ ಗ್ರಾಮದ ಮೇಲೆ ದಾಳಿ ನಡೆಸಿದ್ದರು. ಈ ವೇಳೆದ ಮನೆಗಳನ್ನು ಧ್ವಂಸಗೊಳಿಸಿದ್ದಷ್ಟೇ ಅಲ್ಲದೇ , ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಕ್ರೂರವಾಗಿ ವರ್ತಿಸಿ ಹಲವರ ಸಾವಿಗೂ ಕಾರಣವಾಗಿದ್ದರು. ತಮಗೆ ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಮದ್ರಾಸ್‌ ಹೈಕೋರ್ಟ್‌ ನಲ್ಲಿ ಸಿಬ್ಬಂದಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ವಜಾ ಮಾಡಿದ ನ್ಯಾ. ಪಿ. ವೇಲ್‌ ಮುರುಗನ್‌ ಅವರ ಪೀಠ ಎಲ್ಲಾ ಅಧಿಕಾರಿಗಳನ್ನು ಬಂಧಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

1992 ರಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ಅತ್ಯಾಚಾರಕ್ಕೀಡಾದ 18 ಮಹಿಳೆಯರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಘಟನೆಯಿಂದಾಗಿ ಸಾವನ್ನಪ್ಪಿದ್ದ ಮೂರು ಕುಟುಂಬಗಳಿಗೂ ಸೂಕ್ತ ಪರಿಹಾರ ನೀಡಬೇಕೆಂದು ನ್ಯಾಯಪೀಠ ಆದೇಶಿಸಿದೆ.
ಸಂತ್ರಸ್ತರಿಗೆ ನೀಡುವ ಹಣದಲ್ಲಿ ಶೇ 50 ರಷ್ಟು ಮೊತ್ತವನ್ನು ಆರೋಪಿಗಳಿಂದಲೇ ವಸೂಲಿ ಮಾಡಬೇಕು. ಸಂತ್ರಸ್ತರಿಗೆ ಅಥವಾ ಅವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ವಾಚಾತಿ ಗ್ರಾಮದ ಜನರ ಬದುಕು ಸುಧಾರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ನ್ಯಾಯಮೂರ್ತಿಗಳು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.


[ays_poll id=3]