This is the title of the web page
This is the title of the web page
State NewsVideo News

ಹಟ್ಟಿಯಲ್ಲಿ 2.7ರಷ್ಟು ಪ್ರಮಾಣದಲ್ಲಿ ಲಘು ಭೂಕಂಪ


ರಾಯಚೂರು : ಹಟ್ಟಿ ಚಿನ್ನದ ಗಣಿ ಕಂಪನಿ ಬಳಿ ಅಕ್ಟೋಬರ್ ರಾತ್ರಿ 2.51ರ ಸುಮಾರಿಗೆ ಸಂಭವಿಸಿದ ಲಘು ಭೂಕಂಪ ಸಂಭವಿಸಿದ್ದು, 2.6 ಕಿ.ಮೀ. ವ್ಯಾಪ್ತಿಯಲ್ಲಿ ಪ್ರದೇಶ ಭೂಕಂಪವಾದ ಅನುಭವಾಗಿದೆ ಎಂದು ಹೇಳಾಗುತ್ತಿದೆ.

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಬಳಿ ಲಗು ಭೂಕಂಪವಾಗಿದೆ. ಹಟ್ಟಿ ಚಿನ್ನದ ಗಣಿಯ ಕಂಪನಿ ಸುತ್ತಲಿನ ನಾಲ್ಕು ಗ್ರಾಮದಲ್ಲಿ ಲಘು ಭೂಕಂಪವಾದ ಅನುಭವಾಗಿದೆ. ತಾಲ್ಲೂಕಿನ ಹಟ್ಟಿ, ನಿಲೋಗಲ್, ವೀರಾಪೂರ, ಗೆಜ್ಜಲಗಟ್ಟ ಗ್ರಾಮಸ್ಥರಿಗೆ ಈ ಅನುಭವ ಆಗಿದೆ.

ಕೆಎಸ್ ಎನ್ ಡಿಎಂಸಿ ನಿರ್ದೇಶಕರಿಂದ ನೀಡಿರುವ ಮಾಹಿತಿ ಪ್ರಕಾರ, ಕಂಪನ ಅಳೆಯುವ ರಿಕ್ಟರ್ ಮಾಪಕ ಪ್ರಕಾರ 2.7ರಷ್ಟು ಪ್ರಮಾಣದಲ್ಲಿ ಭೂಕಂಪ ಸಂಭವಿಸಿದೆ. ಇದರ ತೀವ್ರತೆ, 2.6 ಕಿ.ಮೀ. ವ್ಯಾಪ್ತಿಯಲ್ಲಿ ಪ್ರದೇಶ ಭೂಕಂಪವಾದ ಅನುಭವ ಆಗಿದೆ. ಇನ್ನು ಭೂಕಂಪ ಹಿನ್ನೆಲೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಾರ್ವಜನಿಕರು ಯಾವುದೇ ಆತಂಕ ಪಡಬೇಕಾಗಿಲ್ಲ ಕೆಎಸ್ ಎನ್ ಡಿಎಂಸಿ ನಿರ್ದೇಶಕರಿಂದ ಸಂದೇಶ ರವಾನಿಸಿದ್ದಾರೆ.


[ays_poll id=3]