This is the title of the web page
This is the title of the web page
Crime NewsNational News

ತಂದೆಯ ಪಕ್ಕದಲ್ಲಿ ಮಲಗಿದ್ದ 1ವರ್ಷದ ಮಗು ಬೀದಿ ನಾಯಿಗಳ ಪಾಲು..!


K2kannadanews.in

Street Dog Attack :  ತಂದೆ ಜೊತೆ ಗುಡಿಸಲಿನಲ್ಲಿ (Hut)  ಮಲಗಿದ್ದ ಒಂದು ವರ್ಷ ಮಗು (1year baby) ಮೇಲೆ ಬೀದಿ ನಾಯಿಗಳು  (Street Dogs) ದಾಳಿ ಮಾಡಿ ತಿಂದಿರುವ ಘಟನೆ ತೆಲಂಗಾಣದ (Telangana)  ಶಂಶಾಬಾದ್‌ನಲ್ಲಿ ನಡೆದಿದೆ.

ಹೈದ್ರಾಬಾದ್ (Hyderabad) ನಲ್ಲಿನ ಶಂಶಾಬಾದ್‌ನ ರಾಜೀವ್ ಗೃಹಕಲ್ಪ ಸಂಕೀರ್ಣದ ಬಳಿ ಗುಡಿಸಲಿನಲ್ಲಿ ವಾಸವಾಗಿದ್ದರು. ಸೂರ್ಯಕುಮಾರ್ (Suryakumar) ಕೂಲಿ ಕಾರ್ಮಿಕನಾಗಿದ್ದು, ರಾತ್ರಿ ಹಿರಿಯ ಮಗನಾದ (Son) ನಾಗರಾಜು ಮತ್ತು 1ವರ್ಷದ ಮಗುವಿನೊಂದಿಗೆ ಮಲಗಿದ್ದರು. ಬೀದಿ ನಾಯಿಗಳ ಗುಂಪು ಗುಡಿಸಲಿಗೆ ನುಗ್ಗಿ ನಾಗರಾಜು ಮೇಲೆ ದಾಳಿ (Attack) ನಡೆಸಿದೆ. ಇಷ್ಟಾದರೂ ಸೂರ್ಯಕುಮಾರ್ ಗೆ ಎಚ್ಚರವಾಗಿರಲಿಲ್ಲ.

ತಡರಾತ್ರಿ (late night) ಸ್ಥಳೀಯರು ಸೂರ್ಯ ಕುಮಾರ್‌ನನ್ನು ಎಬ್ಬಿಸಿ ವಿಷಯ ತಿಳಿಸಿದರು. ಆದರೆ ಅಷ್ಟರಲ್ಲಾಗಲೇ ಮಗುವನ್ನು ನಾಯಿಗಳು ಬಹುತೇಕ ತಿಂದಿದ್ದವು. ಈ ವ್ಯಾಪ್ತಿಯಲ್ಲಿ ಮಕ್ಕಳ (Children) ಮೇಲೆ ನಡೆದ ಬೀದಿ ನಾಯಿಗಳ ದಾಳಿಯ ಒಂಬತ್ತನೇ ಪ್ರಕರಣ ಇದಾಗಿದ್ದು, ಪೊಲೀಸರು (Police) ಕೇಸು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.


[ays_poll id=3]