
ರಾಯಚೂರು : ಗಧಾರ ಗ್ರಾಮದಲ್ಲಿ ಅನಾಮಧೇಯ ಕಿಡಿಗೇಡಿ ವ್ಯಕ್ತಿಗಳು ರೈತರ ಹೊಲದಲ್ಲಿ ವಾಮಾಚಾರ ಮಾಡುವ ಮೂಲಕ ಗ್ರಾಮದಲ್ಲಿ ಭಯದ ವಾತಾವರಣ ಹುಟ್ಟಿಸಿದ್ದಾರೆ.
ರಾಯಚೂರು ತಾಲೂಕಿನ ಗಾಂಧಾರ ಗ್ರಾಮದಲ್ಲಿ ಇರುವ ನಾಗೇಂದ್ರಪ್ಪ ಎಂಬವರ ಹೊಲದಲ್ಲಿ ವಾಮಾಚಾರ ಮಾಡಲಾಗಿದೆ. ಇನ್ನು ಹೊಲದ ಮಧ್ಯದಲ್ಲಿ ಇರುವ ಹತ್ತಿ ಗಿಡಗಳನ್ನು ಕಿತ್ತು ಹಾಕುವ ಮೂಲಕ, ವಾಮಾಚಾರ ಮಾಡಿದ್ದಾರೆ.
ಈ ವೇಳೆ ನಿಂಬೆಹಣ್ಣು, ತೆಂಗಿನಕಾಯಿ, ಅಕ್ಕಿ, ಬೇಳೆ, ಉಪ್ಪು, ಅರಿಶಿಣ, ಕುಂಕುಮ ಮತ್ತು ಕೆಂಪು ದೋತ್ರ ಬಳಸಿ ವಾಮಾಚಾರ ಮಾಡಲಾಗಿದೆ. ಘಟನೆಯಿಂದ ಸದ್ಯ ನಾಗೇಂದ್ರಪ್ಪ ಹೊಲದ ಕಡೆ ಹೋಗಲು ಕುಟುಂಬಸ್ಥರು ಮತ್ತು ಅಕ್ಕ ಪಕ್ಕದ ಹೊಲದ ರೈತರುಗಳು ಭಯ ಪಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಕೂಡ ಭಯದ ಪರಿಸ್ಥಿತಿ ನಿರ್ಮಾಣವಾಗಿದೆ.
![]() |
![]() |
![]() |
![]() |
![]() |
[ays_poll id=3]