This is the title of the web page
This is the title of the web page
Crime NewsState NewsVideo News

ಪೊಲೀಸರ ಮೇಲೆಯೇ ಮಾರಾಣಾಂತಿಕ ಹಲ್ಲೆ ಮಾಡಿದ ಕಳ್ಳರು..! ವೀಡಿಯೋ ನೋಡಿ..


ರಾಯಚೂರು : ಪೊಲೀಸ್ ಪೇದೆಗಳು ಮತ್ತು ಶಂಕಿತ ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದು ಪೊಲೀಸ್ ಪೇದೆಗಳ‌ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಘಟನೆ ಹಸ್ಮಕಲ್ ಗ್ರಾಮದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಹಸ್ಮಕಲ್ ಗ್ರಾಮದ ಘಟನೆ ನಡೆದಿದ್ದು, ಬಳಗಾನೂರು ಪೊಲೀಸ್ ಠಾಣೆಯ ಪೇದೆಗಳಾದ ಮಂಜುನಾಥ, ಗೋಪಾಲ ಗಂಭೀರ ಗಾಯಗೊಂಡಿದ್ದಾರೆ. ತಾಲೂಕಿನ ಹಸ್ಮಕಲ್ ಗ್ರಾಮದ ಮೋಡೆಕಾರ ದುರುಗಪ್ಪ ಸೇರಿ ಇತರರಿಂದ ಹಲ್ಲೆಮಾಡಲಾಗಿದೆ. ಇತ್ತೀಚೆಗೆ ಬಳಗಾನೂರು ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ದುರುಗಪ್ಪ ಸೇರಿ ಇತರರು ಭಾಗಿಯಾಗಿದ್ದರು ಎನ್ನುವ ಶಂಕೆಯ ಆಧಾರದ ಮೇಲೆ‌ ಪೊಲೀಸರು ಆಪಾದಿತರು ಇದ್ದ ಹಸ್ಮಕಲ್ ಗ್ರಾಮಕ್ಕೆ ತೆರಳಿ ವಿಚಾರಣೆ ನಡೆಸಿದ್ದರು.

ಈ ವೇಳೆ ಪೊಲೀಸ್ ಪೇದೆಗಳು ಮತ್ತು ಶಂಕಿತ ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಮಸ್ಕಿ ಪಟ್ಟಣದ ವಾಲ್ಮೀಕಿ ವೃತ್ತದ ಬಳಿ ಇದೇ ವಿಷಯಕ್ಕೆ ಶಂಕಿತ ಆರೋಪಿಗಳು ಪೊಲೀಸರ ಜತೆ ಜಗಳಕ್ಕೆ ಇಳಿದ್ದಾರೆ. ಮಾತಿನ ಚಕಮಕಿ ವಿಕೋಪಕ್ಕೆ ತೆರಳಿ ಏಕಾಏಕಿ ನಾಲ್ಕೈದು ಜನರ ಗುಂಪು ಪೊಲೀಸ್ ಪೇದೆಗಳ ಮೇಲೆ ಹಲ್ಲೆ ಮಾಡಿದ್ದಾರೆ. ಗೋಪಾಲ ಎನ್ನುವ ಪೇದೆ ಓಡಿ ಹೋಗಿದ್ದು, ಮಂಜುನಾಥ ಎನ್ನುವ ಪೇದೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆಯಲ್ಲಿ ಪೇದೆ ಮಂಜುನಾಥಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸಿಂಧನೂರಿನ ಆಸ್ಪತ್ರೆಗೆ ‌ದಾಖಲಿಸಲಾಗಿದೆ.


[ays_poll id=3]