
ರಾಯಚೂರು : ನದಿಯಲ್ಲಿ ನೀರು ಹೆಚ್ಚಿರುವ ಹಿನ್ನೆಲೆಯಲ್ಲಿ ನೀರಿನೊಂದಿಗೆ ಬಂದ ಮೊಸಳೆ ಹಿಂಡು ನದಿ ಪೊದೆಗಳಲ್ಲಿ ಆಶ್ರಯ ಪಡೆಯುತ್ತಿವೆ. ಕುರಿ ಹಿಂಡಿನಂತೆ ಓಡಾಡುತ್ತಿರುವ ಬೃಹತ್ ಆಕಾರದ ಮೊಸಳೆಗಳ ದೃಶ್ಯ ಆತ್ಕೂರು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ರಾಯಚೂರು ತಾಲೂಕಿನ ಯಾಪಲದಿನ್ನಿ ಹೋಬಳಿಯ ಆತ್ಕೂರು ನದಿ ದಡದಲ್ಲಿ ಕಂಡ ಬಂದ ಮೊಸಳೆಗಳ. ಈ ವಿಡಿಯೋ ನೋಡಿದ್ರೇ ಒಂದು ಕ್ಷಣ ಮೈ ಜುಮ್ಮು ಅನ್ನುತ್ತೆ. ಕುರಿ ಹಿಂಡಿನಂತೆ ಓಡಾಡುತ್ತಿವೆ ಬೃಹತ್ ಆಕಾರದ ಮೊಸಳೆಗಳು, ನದಿ ದಡದಲ್ಲೇ ಸೇರಿವೆ ಮೊಸಳೆಗಳ ಹಿಂಡು, ನದಿಗೆ ನೀರು ಹೆಚ್ಚಿದ ಹಿನ್ನೆಲೆ ನೀರಿನೊಂದಿಗೆ ಬಂದ ಮೊಸಳೆಗಳು ಪೊದೆಗಳಲ್ಲಿ ಆಶ್ರಯ ಪಡೆದಿವೆ.
ಮೊಸಳೆ ಹಿಂಡು ನೋಡಿದ ಗ್ರಾಮಸ್ಥರು ಈಗಾಗಲೇ ಭಯದಲ್ಲಿ ದಿನದೊಡುತ್ತಿದ್ದಾರೆ. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ, ತಾಲೂಕು ಆಡಳಿತ, ಜಿಲ್ಲಾ ಆಡಳಿತ ನದಿ ದಡಕ್ಕೆ ಯಾವುದೇ ಗ್ರಾಮಸ್ಥರು, ತೆರಳದಂತೆ ಮತ್ತು ತಮ್ಮ ಸಾಕು ಪ್ರಾಣಿಗಳನ್ನು ತೆಗೆದುಕೊಂಡು ಹೋಗದಂತೆ ಸೂಚನೆ ನೀಡಿದೆ.
![]() |
![]() |
![]() |
![]() |
![]() |
[ays_poll id=3]