
ರಾಯಚೂರು : ಕೃಷಿ ಸಾಮಾಗ್ರಿಗಳನ್ನ ಕದಿಯಿತ್ತಿದ್ದ ಕಳ್ಳನನ್ನ ರೈತರು ರೆಡ್ ಹ್ಯಾಂಡ್ ಆಗಿ ಸೆರೆಹಿಡಿದು ಮರಕ್ಕೆ ಕಟ್ಟಿಹಾಕಿ ಅಸಮಾಧಾನ ವ್ಯಕ್ತಪಡಿಸಿ ಪೊಲೀಸರಿಗೆ ಹಿಡಿದು ಕೊಟ್ಟ ಘಟನೆಯೊಂದುದು ನಡೆದಿದೆ.
ರಾಯಚೂರು ತಾಲೂಕಿನ ಕಡಗಂದೊಡ್ಡಿ ಗ್ರಾಮದಲ್ಲಿ ಹಲವು ದಿನಗಳ ಕಾಲ ರೈತರ ಹೊಲಗಳಲ್ಲಿ ಇರಿಸಿದಂತಹ ಸಾಮಗ್ರಿಗಳು ಕಳ್ಳತನವಾಗುತ್ತಿದ್ದವು. ಇದರಿಂದ ಬಯಸತ್ತು ಹೋಗಿದ್ದ ರೈತರು ಕಳ್ಳನನ್ನು ಹಿಡಿಯಲು ಸಾಕಷ್ಟು ಕಸರತ್ತು ಮಾಡಿದ್ದರು. ಪಂಪ್ ಸೆಟ್, ಸ್ಪಿಂಕ್ಲರ್ ,ಡ್ರಿಪ್ ಪೈಪ್ ಕಳ್ಳತನಕ್ಕೆ ಬೇಸತ್ತಿದ್ದರು. ಕೊನೆಗೂ ಆ ಪಂಪ್ ಸೆಟ್ ಕಳ್ಳನನ್ನ ಹಿಡಿಯುವಲ್ಲಿ ರೈತರು ಸಫಲರಾಗಿದ್ದಾರೆ.
ವಡವಟ್ಟಿ ಗ್ರಾಮದ ಯಲ್ಲಪ್ಪ ವ್ಯಕ್ತಿ ರೈತರ ಹೊಲಗಳಲ್ಲಿ ಕಳ್ಳತನ ಮಾಡುತ್ತಿದ್ದ, ಇಂದು ಕೂಡ ಹೊಲದಲ್ಲಿ ಯಾರು ಇಲ್ಲವೆಂದು ತಿಳಿದು ಕಳ್ಳತನಕ್ಕೆ ಬಂದಂತಹ ಸಂದರ್ಭದಲ್ಲಿ ರೈತರು ಅವನನ್ನ ಹಿಡಿದು ಗಿಡಕ್ಕೆ ಕಟ್ಟಿ ಹಾಕಿದ್ದಾರೆ. ಆರೋಪಿಯು ಕದ್ದ ಮಾಲನ್ನು ತೆಲಂಗಾಣ, ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಗೆ ಆರೋಪಿಯನ್ನ ಒಪ್ಪಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]