This is the title of the web page
This is the title of the web page
Politics News

ಗೊಂದಲಕ್ಕೆ ಕಾರಣವಾದ ಶ್ರೀರಾಮುಲು ಟ್ವಿಟ್..


K2 ಪೊಲಿಟಿಕಲ್ ನ್ಯೂಸ್ : ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಟ್ವಿಟ್ ನಿಂದ ರಾಜಕೀಯ ವಲಯದಲ್ಲಿ ಗೊಂದಲ ಮತ್ತು ಅಚ್ಚರಿ ಉಂಟುಮಾಡಿದೆ. ಜನಾರ್ಧನ್ ರೆಡ್ಡಿ ಅವರ ನೂತನ ಪಕ್ಷದ ವಿಚಾರವಾಗಿ ಟ್ವಿಟ್ ಮಾಡಿದ್ದು ಇದರಿಂದ ಶ್ರೀರಾಮುಲು ಬಿಜೆಪಿ ಪಕ್ಷ ತೆರೆಯಲ್ಲಿದ್ದಾರಾ ಎಂಬ ಮಾತುಗಳು ಹರಿದಾಡುತ್ತಿವೆ.

ಹೌದು ರೆಡ್ಡಿ ಪಕ್ಷಕ್ಕೆ ಅವರ ಕುಚುಕು ಗೆಳೆಯ ಶ್ರೀರಾಮುಲು ಸೇರ್ಪಡೆಯಾಗಲಿದ್ದಾರಾ? ಎಂಬ ಚರ್ಚೆ ಹುಟ್ಟಿಕೊಂಡಿದೆ. ಶ್ರೀರಾಮುಲು ಟ್ವಿಟ್ಟರ್ ಖಾತೆಯಿಂದ ಮಾಡಿರುವ ಟ್ವಿಟ್ ವೊಂದು ಈ ಚರ್ಚೆಗೆ ಕಾರಣವಾಗಿದೆ. ‘ಜ. 17ನೇ 2023ರಂದು ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮಕ್ಕೆ ಸಿಂಧನೂರಿನ ಜನತೆಯನ್ನು ಹೃದಯ ಪೂರ್ವಕವಾಗಿ ಆಹ್ವಾನಿಸುತ್ತಿದ್ದೇನೆ ಎಂದು ಟ್ವಿಟ್ ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ಬರಬೇಕಿದೆ.

ಶ್ರೀರಾಮುಲು ಟ್ವಿಟ್ ಡಿಲೀಟ್ : ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸಚಿವ ಶ್ರೀರಾಮುಲು ಮಾಡಿದ್ದ ಟ್ವಿಟ್ ಅನ್ನು ಡಿಲೀಟ್ ಮಾಡಲಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಟ್ವಿಟ್ ಡಿಲೀಟ್ ಮಾಡಲಾಗಿದೆ. ಹೀಗಾಗಿ, ರಾಮುಲು ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆ ಶುರುವಾಗಿದೆ.


[ays_poll id=3]