This is the title of the web page
This is the title of the web page
Local News

RTPS ಬೂದಿಯ ಸಾಗಣಿಕೆ ಬಂದ್‌ ಸಂಕಷ್ಟಕ್ಕೆ ಸಿಲುಕಿ ಕೂಲಿ ಕಾರ್ಮಿಕರು


ರಾಯಚೂರು : ರಾಯಚೂರು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಘಟಕಗಳಿಂದ ಹೊರ ಬರುವ ಬೂದಿಯ ಸಾಗಣಿಕೆ ನಿರ್ವಹಣೆಯ ಮತ್ತು ತಾಂತ್ರಿಕ ದೋಷ ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಗಿತ ಮಾಡಲಾಗಿದೆ ಇದರಿಂದ ಇದನ್ನೇ ನಂಬಿಕೊಂಡು ಕೆಲಸ ಮಾಡುತ್ತಿದ್ದ ಸಾಕಷ್ಟು ಕಾರ್ಮಿಕರು ಕೆಲಸವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಇರುವಂತಹ ವಿದ್ಯುತ್ ಉತ್ಪಾದನಾ ಕೇಂದ್ರದ, 8 ಘಟಕಗಳಲ್ಲಿ ಕಲ್ಲಿದ್ದಲು ಮೂಲಕ ವಿದ್ಯುತ್ ಉತ್ಪಾದನೆ ನಂತರ ಹೊರಬೀಡುವ, ಬೂದಿಯೂ, ಇಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುತ್ತದೆ. ಅದರಿಂದ ಹಲವು ಸಣ್ಣ ಕೈಗಾರಿಕಾ ಕಾರ್ಖಾನೆಗಳು ಮತ್ತು ಸಾಕಷ್ಟು ಜನ ಕಾರ್ಮಿಕರು ಜೀವನ ಸಾಗಿಸುತ್ತಿದ್ದಾರೆ.

ಆದರೆ ಬೂದಿ ಸಾಗಣಿಕೆಯನ್ನು ಎರಡು ತಿಂಗಳಿಂದ ನಿರ್ವಹಣೆಯ ಮತ್ತು ತಾಂತ್ರಿಕ ದೋಷ ಕಾಮಗಾರಿ ಇದೆ ಎಂಬ ನೆಪ ಹೇಳಿ ಬಂದ್ ಮಾಡಲಾಗಿದೆ. ಇದರಿಂದ ಸಾಕಷ್ಟು ಕಾರ್ಮಿಕರು ಕೆಲಸವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇನ್ನೊಂದು ಕಡೆ ಸಣ್ಣ ಕೈಗಾರಿಕೆಗಳು ನಷ್ಟ ಅನುಭವಿಸುತ್ತೇವೆ. ಹಾಗಾಗಿ ನಿರ್ವಹಣೆ ಮತ್ತು ತಾಂತ್ರಿಕ ದೋಷಗಳನ್ನು ಆದಷ್ಟು ಬೇಗ ಸರಿಪಡಿಸಿ ಪುನಃ ಬೂದಿ ಸಾಗಾಣಿಕೆ ಪುನರಾಂಭಿಸಿ ಕಾರ್ಮಿಕರ ಜೀವನಕ್ಕೆ ಅನುಕೂಲ ಮಾಡಿಕೊಡಬೇಕಿದೆ RTPS.


[ays_poll id=3]