This is the title of the web page
This is the title of the web page
Crime News

ವೃದ್ಧನಿಂದ ಬಾಲಕಿ ಮೇಲೆ ಅತ್ಯಾಚಾರ : ವಿಷ ಸೇವಿಸಿದ ತಾಯಿ


K2 ಕ್ರೈಂ ನ್ಯೂಸ್ : ಪಾಲಕರು ಮತ್ತು ಪೊಲೀಸ್ ಇಲಾಖೆ ಅದೆಷ್ಟೇ ಎಚ್ಚರದಿಂದ ಇಬ್ಬರು, ಕಾಮ ಪಿಶಾಪಿಗಳಿಗೆ ಒಂದಲ್ಲ ಒಂದು ಕಡೆ ಹೆಣ್ಮಕ್ಕಳು ಬಲಿಯಾಗುತ್ತಾಲೇ ಇದ್ದಾರೆ. 73 ವರ್ಷದ ವೃದ್ಧನೂರ್ವ ಪುಟ್ಟ ಬಾಲಕಿ ಮೇಲೆ ಅತ್ಯಾಚಾರ ಮಾಡಿದಾಗ ಘಟನೆ ನಡೆದಿದೆ.

ಹಾಸನದ ಸಕಲೇಶಪುರದಲ್ಲಿ ವೃದ್ಧನೊಬ್ಬ ಅಪ್ರಾಪ್ತೆ ಮೇಲೆ ಎರಗಿ ಅತ್ಯಾಚಾರ ಮಾಡಿದ್ದಾನೆ. ಮೊಮ್ಮಗಳ ವಯಸ್ಸಿನ ಬಾಲಕಿ ಮೇಲೆ ಕಣ್ಣು ಹಾಕಿದ ವೃದ್ಧನೊಬ್ಬ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಮಂಜಯ್ಯ (73) ವರ್ಷದ ವೃದ್ಧ ಅತ್ಯಾಚಾರ ಮಾಡಿದ ಕೀಚಕ. 13 ವರ್ಷದ ಬಾಲಕಿ ಈಗ ಎರಡು ತಿಂಗಳ ಗರ್ಭಿಣಿಯಾಗಿದ್ದಾಳೆ. ಈ ದುಷ್ಟ ವೃದ್ಧ ಸಾಮಾಜಿಕ ಕಾರ್ಯಕರ್ತನೆಂದು ಬಿಂಬಿಸಿಕೊಂಡು ಇಂತಹ ಹೇಯ ಕೃತ್ಯ ಎಸಗಿದ್ದಾನೆ. ವಿಧವಾವೇತನ, ಪಿಂಚಣಿ ಹಣ ಕೊಡಿಸುವುದಾಗಿ ಹಲವು ಮಹಿಳೆಯರನ್ನು ಎಮೋಷನಲ್ ಬ್ಲಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.

ಇನ್ನು ವೃದ್ಧನ ವಿರುದ್ಧ ಹೋರಾಡಲು ಆಗದೆ, ಮಗಳಿಗಾದ ಅನ್ಯಾಯದಿಂದ ಮನನೊಂದ ತಾಯಿ ವಿಷ ಸೇವಿಸಿದ್ದು, ಹಾಸನದ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿ ಮಂಜಯ್ಯನನ್ನು ಪೊಲೀಸರು ಬಂಧಿಸಿದ್ದಾರೆ.


[ays_poll id=3]