This is the title of the web page
This is the title of the web page
State NewsVideo News

ಸಂಬಳ ಕೊಡಿ ಅಂದ್ರೆ ಜಾತಿ ನಿಂದನೆ ಕೇಸ್ ಮಾಡ್ತಾರಂತೆ : ಪಿಡಿಒ..?


K2kannadanews.in

ರಾಯಚೂರು : ಗ್ರಾಮಪಂಚಾಯತಿ ಡಿ ಗ್ರೂಪ್ ನೌಕರರ (D group staff) ಮೇಲೆ ಅವಾಚ್ಯ ಶಬ್ದಗಳಿಂದ(speechless words) ನಿಂದಿಸಿ ದೌರ್ಜನ್ಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿಯ(officer) ಬಾಯಲ್ಲಿ ಇದೆಂತಾ ಭಾಷೆ, ಸರ್ವಾಧಿಕಾರಿಯಾದ ಪಿಡಿಒ ಆಡಿಯೋ (audio) ಸಾಮಾಜಿಕ ಜಾಲತಾಣದಲ್ಲಿ‌ ವೈರಲ್ ಆಗಿದೆ.

ಹೌದು ರಾಯಚೂರು ಜಿಲ್ಲೆ ಮಸ್ಕಿ (mask I) ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿ PDO ಪೋನ್ ಸಂಭಾಷಣೆ (phone conversation) ವೈರಲ್ ಆಗಿದೆ. ಪಿಡಿಒ ರಾಮಪ್ಪ ತಮ್ಮ ಅಧಿಕಾರದ ಮದದಲ್ಲಿ ಗುಂಡಾ ವರ್ತನೆ ತೋರಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ವೇತನವಿಲ್ಲದೇ (salary) ಪರದಾಡುತ್ತಿರುವ ಡಿ ಗ್ರೂಪ್ ನೌಕರರು ವೇತನ ಕೇಳಿದ್ದಕ್ಕೆ ಅವರ ವಿರುದ್ಧ ಬಾಯಿ ಹರಿಬಿಟ್ಟು, ಜಾತಿ ನಿಂದನೆ ಕೇಸ್ ದಾಖಲು ಮಾಡ್ತಿನಿ ಎಂದು ಬೆದರಿಕೆ ಹಾಕಿದ್ದಾರೆ.

ಪೇಮೆಂಟ್ ಕೇಳಿದ ಪಂಚಾಯತಿ ಸಿಬ್ಬಂದಿಗಳ ಮೇಲೆ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಪಿಡೆಒ, ಕೆಳ ಹಂತದ ನೌಕರರಿಗೆ ಬಾಯಾಗ್ ಬೂಟ್ ಇಡ್ತಿನಿ,‌ ಸು..ಮಗ, ಬೋ..ಮಗ ಎಂದು ಬೈದು ಬೆದರಿಕೆ ಹಾಕಿದ್ದಾರೆ ರಾಮಪ್ಪ. ಅಷ್ಟೇ ಅಲ್ಲದೇ ವೇತನ ಕೇಳುವ ಸಬ್ಬಂದಿಗಳಿಗೆಲ್ಲ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನಿನ್ಗ ಸೊಕ್ಕು ಬಂದೈತಿ ಮಗನ ಅರ್ಟಾಸಿಟಿ ಮಾಡ್ತಿನಿ ಅಂತಾರೇ, ನಾವೇನು ಕೇಳಬಾರದ್ದ ಕೇಳಿವಿ ಅಂದ್ರೆ, ಮು..ಳಿ ಕಡಿತ್ಯಾದೇನು ಮಗನ್ಯಾ… ಸು.. ಮಗನ್ಯಾ… ಬೋ.. ಮಗನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋನ್ ನಲ್ಲೇ ಬೈದಿರೋ ಪಿಡಿಒ ರಾಮಪ್ಪ ಆಡಿಯೋ ಸಾಕಷ್ಟು ವೈರಲ್ ಆಗಿ ಸಾಕಷ್ಟು ಜನ ನೆಟ್ಟಿಗರು ಅಸಮಧಾನ ಹೊರಹಾಕುತ್ತಿದ್ದಾರೆ.


[ays_poll id=3]