ರಾಯಚೂರು : ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ 01ರ ವ್ಯಾಪ್ತಿಯ 11 ಕೆವಿ ಮಾರ್ಗ ತುರ್ತು ದುರಸ್ತಿ ಕಾಮಗಾರಿ ನಿರ್ವಹಿಸುತ್ತಿರುವ ಪ್ರಯುಕ್ತ ಸೆಪ್ಟೆಂಬರ್ 13ರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 05ಗಂಟೆಯವರೆಗೆ ವಿದ್ಯುತ್ ಗೆ ತಯವಾಗಲು ಗ್ರಾಹಕರು ಸಹಕರಿಸಲು ಜೆಸ್ಕಾಂ ಇಲಾಖೆ ಮನವಿ ಮಾಡಿದೆ.
ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿ, ವೆಂಕಟೇಶ್ವರ ಕಾಲೋನಿ, ಬೆಲ್ಲಂ ಕಾಲೋನಿ, ಕುಲಸುಂಬಿ ಕಾಲೋನಿ, ಡಿ.ಸಿ ಗೆಸ್ಟ್ ಹೌಸ್, ಮಹಾಲಕ್ಷ್ಮಿ ಲೇಔಟ್, ದೇವರ ಕಾಲೋನಿ, ಎ.ಟಿ.ಎಮ್ ಸರ್ಕಲ್, ಹೊಸುರು, ರಾಂಪೂರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ 01ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.