This is the title of the web page
This is the title of the web page
Crime NewsLocal News

ನಿರ್ಲಕ್ಷ್ಯದ ಚಾಲನೆ :ಯುವಕನನ್ನು ಬಲಿ ಪಡೆದ ಬೊಲೆರೊ ಜೀಪ್


K2kannadanews.in

Road Accident ರಾಯಚೂರು : ಚಾಲಕನ ನಿರ್ಲಕ್ಷ್ಯದಿಂದ (Negligence) ಚಾಲನೆಯಿಂದ (Driving) ವಾಹನ ಪಲ್ಟಿಯಾಗಿ ಯುವಕನೊರ್ವ ಸ್ಥಳದಲ್ಲೇ ಮೃತಪಟ್ಟ (Spot death) ಘಟನೆ ಯಾಪಲದಿನ್ನಿ ಗ್ರಾಮದ ಬಳಿಯ ಹೆದ್ದಾರಿಲ್ಲಿ (Highway) ನಡೆದಿದೆ.

ರಾಯಚೂರು ತಾಲ್ಲೂಕಿನ ಯಾಪಲದಿನ್ನಿ ಗ್ರಾಮದ ಬಳಿಯ ಎನ್‌ಎಚ್ 150 (C) ಮಾರ್ಗದಲ್ಲಿ ಅಪಘಾತ (Road Accident ) ಸಂಭವಿಸಿದೆ. ಆಂಜನೇಯ (23) ಮೃತ ದುರ್ದೈವಿ. ಚಂದ್ರಬಂಡಾ ಗ್ರಾಮದ ಆಂಜನೇಯ ಸೇರಿ ಮೂವರು ಬೊಲೆರೋದಲ್ಲಿ ಪ್ರಯಾಣಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಪಲ್ಟಿ ಹೊಡೆದಿದೆ. ಬೊಲೆರೋ ಅಡಿ ಸಿಲುಕಿದ್ದ ಆಂಜನೇಯನಿಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಬ್ಬ ಗಾಯಾಳು ನಾಗರಾಜ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಚಾಲಕ ವಿರೇಶ್ ನ(Veeresh) ನಿರ್ಲಕ್ಷ್ಯಕ್ಕೆ ಈ ಅಪಘಾತ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಬೊಲೆರೋ (Bolero) ವಾಹನದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಕಬ್ಬಿಣದ (Iron) ವಸ್ತುಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ. ಹೀಗಾಗಿ ಭಾರಕ್ಕೆ (Weight) ನಿಯಂತ್ರಣ ತಪ್ಪಿ (Out of control) ವಾಹನವು ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಅಪಘಾತ ಸ್ಥಳಕ್ಕೆ ರಾಯಚೂರು ಎಸ್‌ಪಿ (SP) ನಿಖಿಲ್.ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


[ays_poll id=3]