This is the title of the web page
This is the title of the web page
Crime NewsState NewsVideo News

ವಕೀಲನನ್ನು ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು..!


K2kannadanews.in

ಕ್ರೈಂ ನ್ಯೂಸ್ : ಸಾಯಿ ಮಂದಿರ(Sai mandira) ಹತ್ತಿರದ ಅಪಾರ್ಟ್ಮೆಂಟ್ (Apartment) ಬಳಿ ಹಾಡಹಗಲೇ ವಕೀಲನ ಬರ್ಬರ ಹತ್ಯೆ (Lawyer Murder) ಆಗಿದೆ. ದುಷ್ಕರ್ಮಿಗಳು(criminals) ವಕೀಲರಾದ ಈರಣ್ಣಗೌಡ ಪಾಟೀಲ್ (40) ಕೋರ್ಟಿಗೆ ತೆರಳುತ್ತಿದ್ದ ವೇಳೆ ಮಾರಕಾಸ್ತ್ರಗಳಿಂದ ಹಲ್ಲೆಮಾಡಿ ಹತ್ಯೆ ಮಾಡಿದ್ದಾರೆ.

ಕಲಬುರ್ಗಿ ನಗರದಲ್ಲಿನ ಮನೆಯಿಂದ ಕೋಟ್೯ಗೆ(court) ತೆರುಳುವಾಗ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಏಕಾಏಕಿ ಮಚ್ಚು, ಲಾಂಗ್‌ಗಳಿಂದ(lang) ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ವಕೀಲ ಈರಣ್ಣಗೌಡ(erannagoda) ಬೈಕ್ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ(escape). ಆದರೂ ಬಿಡದೆ ಹಂತಕರಿಬ್ಬರು(killer’s) ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು‌ ಬರೋಬ್ಬರಿ ಅರ್ಧ ಕಿಲೋ ಮೀಟರ್‌(half kilometres) ಅಟ್ಟಾಡಿಸಿಕೊಂಡು ಬಂದಿದ್ದಾರೆ. ಅವರಿಂದ ತಪ್ಪಿಸಿಕೊಂಡ ವಕೀಲ ಈರಣ್ಣಗೌಡ ಅಪಾರ್ಟ್‌ಮೆಂಟ್ ಕಡೆಗೆ ನುಗ್ಗಿದ್ದಾರೆ. ವಕೀಲರು ಓಡುತ್ತಲೇ ತಮ್ಮ ರಕ್ಷಣೆಗಾಗಿ(protection) ಇಟ್ಟುಕೊಂಡಿದ್ದ ರಿವಾಲ್ವಾರ್‌(Revolver) ತೆಗೆಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ಹಂತಕರು ಕೊಚ್ಚಿ ಕೊಲೆಗೈದಿದ್ದಾರೆ.

 

ಹಂತಕ ಸಿಟ್ಟು(murderous rage) ಎಷ್ಟು ಇತ್ತು ಎಂದರೆ ವಕೀಲ ಸತ್ತಿದ್ದರೂ ದೊಡ್ಡ ಕಲ್ಲನ್ನು(stone) ತಲೆ ಮೇಲೆ ಎತ್ತಿ ಹಾಕಿದ್ದಾರೆ. ಆತ ಉಸಿರು ಚೆಲ್ಲಿದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡು ಪರಾರಿ ಆಗಿದ್ದಾರೆ. ವಕೀಲನನ್ನು ಅಟ್ಟಾಡಿಸಿ ಕೊಲೆಗೈದ ದೃಶ್ಯ ಸಿಸಿ ಕ್ಯಾಮೆರದಲ್ಲಿ(CC camera) ಸೆರೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿವಿ ಠಾಣೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ರಕ್ತಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ (Posthumous) ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


[ays_poll id=3]