This is the title of the web page
This is the title of the web page
Crime NewsNational News

ಮಹಿಳೆಯರನ್ನ ಪ್ರೆಗ್ನೆಂಟ್‌ ಮಾಡುವುದಕ್ಕೆ ಲಕ್ಷ ಲಕ್ಷ ಕೊಟ್ಟು ಜಾಬ್ ಆಫರ್..!


K2kannadanews.in

Crime News : ಜಗತ್ತಿನಲ್ಲಿ ಹಣಕ್ಕಾಗಿ (money) ಜನ ವಿಲಕ್ಷಣ ಕೆಲಸಗಳನ್ನು ಮಾಡುತ್ತಾರೆ. ಅಂತಹದ್ದೆ ಒಂದು ಪ್ರಕರಣ ಬೆಳಕಿಗೆ ಬಂದಿದೆ. ವಿಲಕ್ಷಣ ಜಾಬ್‌ ಏಜೆನ್ಸಿಯೊಂದನ್ನು (Weird job agency) ಪತ್ತೆ ಹಚ್ಚಲಾಗಿದೆ. ನಿರುದ್ಯೋಗ (unemployed) ಯುವಕರನ್ನು ಟಾರ್ಗೆಟ್ (youth Target) ಮಾಡಿ, ಲಕ್ಷ ಲಕ್ಷ ರೂಪಾಯಿಗಳ ಆಸೆ ತೋರಿಸಿ ಮಹಿಳೆಯರನ್ನ ಗರ್ಭವತಿ(impregnate) ಮಾಡುವ ಕೆಲಸ ಕೊಡುತ್ತಿತ್ತು ಆ ಗ್ಯಾಂಗ್‌.

ಹೌದು ಅಚ್ಚರಿಯಾದರೂ ನಿಜವೇ, ಇದೇ ವಿಚಾರಕ್ಕೆ 8 ಜನ ಆರೋಪಿಗಳನ್ನು (accused) ಬಿಹಾರದ ನವಾಡದಲ್ಲಿ (Bihar, nawada) ಪೊಲೀಸರು ಬಂಧಿಸಿದ್ದಾರೆ (arrested). ಅಮಾಯಕ, ಕೆಲಸದ ಅನಿವಾರ್ಯತೆ ಇರುವ ಯುವಕರನ್ನ ಸಂಪರ್ಕಿಸಿ, ಅವರಿಗೆ 13 ಲಕ್ಷ ನೀಡುವುದಾಗಿ ಆಸೆ ತೋರಿಸಿ ಮಹಿಳೆಯರನ್ನು ಗರ್ಭವತಿ ಮಾಡುವ ಕೆಲಸ ಮಾಡಿಸುತ್ತಿತ್ತು ಈ ಗ್ಯಾಂಗ್ (Gang). ಆಲ್‌ ಇಂಡಿಯಾ ಪ್ರೆಗ್ನೆಂಟ್‌ ಜಾಬ್‌ ಸರ್ವೀಸ್‌ ಎಂಬ ಹೆಸರಿನಲ್ಲಿ ಇಂಥದ್ದೊಂದು ನೀಚ ಕಾರ್ಯ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ (social media), ವಾಟ್ಸಾಪ್‌ಗಳ (Whats app) ಮೂಲಕ ಯುವಕರನ್ನ ಸಂಪರ್ಕಿಸಿ ಕೆಲಸದ ಬಗ್ಗೆ ಮಾಹಿತಿ ನೀಡುತ್ತಿತ್ತು. ಆಸಕ್ತಿ ಇದ್ದವರು 799 ರೂಪಾಯಿ ಕೊಟ್ಟು ರಿಜಿಸ್ಟರ್‌ (registration) ಆಗುವಂತೆ ತಿಳಿಸುತ್ತಿತ್ತು . ಬಳಿಕ ಮಗುವಿನ ಅಗತ್ಯವಿರುವ ಹೆಂಗಸರ ಫೋಟೊ ತೋರಿಸಿ, ಯಾರನ್ನು ಗರ್ಭವತಿ ಮಾಡಲು ಇಚ್ಛಿಸುತ್ತೀರಿ ಅವರ ಫೋಟೊ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗುತ್ತಿತ್ತು. ಜೊತೆಗೆ ಮಹಿಳೆಯರ ಬ್ಯೂಟಿ (Bury) ಮೇರೆಗೆ 5 ರಿಂದ 20 ಸಾವಿರದ ವರೆಗೆ ಸೆಕ್ಯೂರಿಟಿ ಡಿಪಾಸಿಟ್ (security disposit) ಕೂಡ ಯುವಕರಿಂದ ಪಡೆಯಲಾಗುತ್ತಿತ್ತು. ಒಮ್ಮೆ ಯುವಕನಿಂದ ಮಹಿಳೆ ಗರ್ಭಧರಿಸಿದರೆ 13 ಲಕ್ಷ ರೂಪಾಯಿ ಪಕ್ಕಾ , ಒಮ್ಮೆ ಆಗದಿದ್ದರೆ 5 ಲಕ್ಷ ರೂಪಾಯಿ ಹಣವನ್ನು ನೀಡಲಾಗುತ್ತಿತ್ತು. ಈ ಗ್ಯಾಂಗ್ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ 8 ಮಂದಿಯನ್ನು ಬಂಧಿಸಿದ್ದು, ಗ್ಯಾಂಗ್‌ನ ಮಾಸ್ಟರ್‌ ಮೈಂಡ್‌ ಮಾತ್ರ ತಲೆಮರೆಸಿಕೊಂಡಿದ್ದಾನೆ.


[ays_poll id=3]