
ರಾಯಚೂರು: ಮುಂಗಾರು ಆರಂಭವಾಗಿ ಈಗಾಗಲೇ 12 ದಿನಗಳು ಕಳೆದು ಹೋಗಿವೆ. ಆದರೂ ರಾಯಚೂರು ಜಿಲ್ಲೆಯಲ್ಲಿ ಮಳೆರಾಯನ ದರ್ಶನ ಆಗಿಲ್ಲ. ಮುಂಬರುವ 10 ದಿನಗಳಲ್ಲಿ ಮಳೆ ಬರದಿದ್ದರೆ 65 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ. ಮಳೆ ಬಾರದ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ.
ತುಂಗಭದ್ರಾ ಜಲಾಶಯದ ಓಡಲು ಈಗಾಗಲೇ ಖಾಲಿಯಾಗಿದೆ. ಪ್ರಸ್ತುತ ಐದು ಟಿಎಂಸಿ ನೀರು ಮಾತ್ರ ಸಂಗ್ರಹಣೆಯಲ್ಲಿದೆ. ರಾಯಚೂರು ಜಿಲ್ಲೆಯ ಮೂರು ತಾಲ್ಲೂಕಿಗೆ ಇದೇ ಜಲಾಶಯದಿಂದ ನೀರು ಪೂರೈಕೆಯಾಗುತ್ತಿದೆ. ಜೂನ್ ಮೊದಲ ವಾರದಲ್ಲೇ ಮಳೆ ಶುರುವಾಗಿದ್ದರೆ ನೀರಿನ ಕೊರತೆಯಾಗುತ್ತಿರಲಿಲ್ಲ. ಆದರೆ, ಮಳೆ ಬರುವುದು ವಿಳಂಬವಾಗಿರುವ ಕಾರಣ ಕೆಲ ಕಡೆ ಕೆರೆಗಳು ಬತ್ತಿವೆ. ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮಲ್ಲನಗುಡ್ಡ, ಲಿಂಗಸುಗೂರು ತಾಲ್ಲೂಕಿನ ಯರಗುಂಟಿ ಗ್ರಾಮಕ್ಕೆ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಜಿಲ್ಲಾಡಳಿತ ಬೋರ್‌ವೆಲ್ ಮೂಲಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುತ್ತಿದೆ.
ಪ್ರಸ್ತುತ ರಾಯಚೂರು ನಗರಕ್ಕೆ ನಿರೋಧಗಿಸುವ ರಾಂಪುರ ಕೆರೆಯಲ್ಲಿ 10 ದಿನಗಳಿಗೆ ಬೇಕಾಗುವಷ್ಟು ನೀರು ಲಭ್ಯ ಇದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಈಗ 1 ಟಿಎಂಸಿ ನೀರು ಅಗತ್ಯವಿದೆ. ತುಂಗಭದ್ರಾ ಜಲಾಶಯದಿಂದ ಎರಡು ದಿನಗಳಲ್ಲಿ ನೀರು ಬಿಡುಗಡೆ ಮಾಡುವಂತೆ ಮಾತುಕತೆ ಮಾಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
![]() |
![]() |
![]() |
![]() |
![]() |
[ays_poll id=3]