
ರಾಯಚೂರು : ತಲೆ ಮೇಲೆ ಕಲ್ಲು ಎತ್ತಿಹಾಕಿ ಪತ್ನಿಯನ್ನು ಕೊಂದು ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜೊಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಸೆ.22ರಂದು ಪತ್ನಿ ಅಂಬಮ್ಮ(31)ಳಿಗೆ ಮಲಗಿದ ವೇಳೆ ಕಲ್ಲು ಎತ್ತಿ ಹಾಕಿ ಪತಿ ಕೊಲೆ ಮಾಡಿದ್ದ ಖಾಸಿಂಮಪ್ಪ. ಸ್ಥಳದಿಂದ ಪರಾರಿಯಾದ ನಂತರ ಅರೋಲಿ ಸೀಮಾದ ಅಡವಿ ಖಾನಾಪೂರ ಗ್ರಾಮದ ಹೊಲದಲ್ಲಿ ನೇಣಿಗೆ ಶರಣಾಗಿದ ಸ್ಥಿತಿಯಲ್ಲಿ ಖಾಸಿಂಮಪ್ಪನ ಶವಪತೆಯಾಗಿದೆ.
ಪ್ರತಿದಿನವೂ ಖಾಸಿಂಮಪ್ಪ ಕುಡಿದು ಬಂದು ಪತ್ನಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ,
ಅಡವಿ ಖಾನಾಪುರ ಗ್ರಾಮದ ಗ್ರಾಪಂ ಸದಸ್ಯನ ಹೊಲದಲ್ಲಿ ನೇಣಿಗೆ ಶರಣಾಗಿದ್ದು, ಗಂಡ ಹೆಂಡತಿ ನಡುವೆ ಜಗಳದಲ್ಲಿ ಇಬ್ಬರು ಮೃತದಿಂದ ಇಬ್ಬರು ಮಕ್ಕಳು ಅನಾತವಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಶವವನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಎರಡು ಘಟನೆ ಸಂಭವಿಸಿದ್ದಂತೆ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
![]() |
![]() |
![]() |
![]() |
![]() |
[ays_poll id=3]