
K2 ಕ್ರೈಂ ನ್ಯೂಸ್ : ಗಂಡನ ಕಿರುಕುಳಕ್ಕೆ ಬೇಸತ್ತು ತವರು ಮನೆ ಸೇರಿದ್ದ ಪಾಪಿ ಪ್ರತಿಯೊಬ್ಬ ಹೆಂಡತಿ ತವರು ಮನೆಗೆ ಹೋಗಿ ಗುಂಡು ಹಾರಿಸಿ ಕೊಂದ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರ್ ಕೆ ಗ್ರಾಮದಲ್ಲಿ, ಪಾಪಿ ಪತಿಯೊಬ್ಬ ಪತ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಹನಮವ್ವ (36) ಮೃತ ದುರ್ದೈವಿ. ಬಸವರಾಜ್ ಎಂಬಾತ ಗುಂಡು ಹಾರಿಸಿದ ಪತಿಯಾಗಿದ್ದಾನೆ. ಹನಮವ್ವ ಹಾಗೂ ಬಸವರಾಜ್ ಮದುವೆ ಆದಾಗಿಂದ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು.
ಗಂಡನ ಕಿರುಕುಳಕ್ಕೆ ಬೇಸತ್ತ ಹನಮವ್ವ ತವರು ಮನೆ ಸೇರಿದ್ದಳು. ಇತ್ತ ತವರುಮನೆಯಲ್ಲಿದ್ದ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಚಿತ್ತಾಪೂರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]