
K2 ನ್ಯೂಸ್ ಡೆಸ್ಕ್ : ಗ್ಯಾರಂಟಿಗಳ ಮೂಲಕ ಆರ್ಥಿಕ ಸ್ಥಿತಿಯಲ್ಲಿ ಅಸಮತೋಲನ ಕಾಣುತ್ತಿರುವ ಸರ್ಕಾರಕ್ಕೆ ಅಬಕಾರಿ ಇಲಾಖೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕಾಣುತ್ತಿದೆ. ಮದ್ಯದ ಮೇಲೆ ಎಷ್ಟೇ ಟ್ಯಾಕ್ಸ್ ಹಾಕಿದರೂ ಕೇಳಲ್ಲ ಅನ್ನೋದು ಕೂಡಾ ಸರ್ಕಾರಕ್ಕಿರುವ ಒಂದು ನೆಮ್ಮದಿ..!
ವಿಷಯ ಏನಪ್ಪಾ ಅಂದರೆ, ಇನ್ನು ಮುಂದೆ ಶಾಪಿಂಗ್ ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲೂ ಮದ್ಯ ಮಾರಾಟಕ್ಕೆ ಸರ್ಕಾರ ಪ್ಲ್ಯಾನ್ ಮಾಡಿದೆ. ಹೀಗಾಗಿ ಇನ್ನು ಮುಂದೆ ಹೆಣ್ಮಕ್ಕಳು ಶಾಪಿಂಗ್‌ಗೆ ಅಂತ ಹೊರಟಾಗ ನೀವು ಹೋಗ್ಬನ್ನಿ, ನಾನು ಬರೋಲ್ಲ ಅನ್ನೋ ಗಂಡಸರು ಕೂಡಾ ನಾನೂ ಬರ್ತೀನಿ ಇರಿ ಅನ್ನಬಹುದು! ದೊಡ್ಡ ದೊಡ್ಡ ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲಿ ಆಗಾಗಲೇ ಸಿಎಲ್-2 ಪರವಾನಗಿ ಹೊಂದಿರುವವರಿಂದ ಮದ್ಯ ಖರೀದಿಸಿ ಮಾರಾಟ ಮಾಡಲಾಗುತ್ತಿದೆ. ಆದರೆ, ಮಾಲ್‌ಗಳಿಗೆ ಪ್ರತ್ಯೇಕ ಪರವಾನಗಿ ನೀಡಿಲ್ಲ.
ಇದೀಗ ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡೋದಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಅಬಕಾರಿ ಸಚಿವರ ಜತೆಗೆ ಒಂದು ಸುತ್ತಿನ ಸಭೆ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು ಸರ್ಕಾರ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಗ್ಯಾರಂಟಿಗಳನ್ನ ಜಾರಿ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋ ಸರ್ಕಾರ, ಇದೀಗ ತನ್ನ ಆದಾಯವನ್ನ ಹೆಚ್ಚಿಸಿಕೊಳ್ಳಲು ಈ ಅಸ್ತ್ರ ಬಳಸಲು ತಯಾರಿ ನಡೆಸಿದೆ. ಮದ್ಯಪ್ರಿಯರಿಗೆ ಗುಡ್‌ನ್ಯೂಸ್ ಕೊಡೋದರ ಜೊತೆಗೆ ಆದಾಯ ಏರಿಕೆಗೂ ಪ್ಲಾನ್ ಮಾಡಿಕೊಂಡಿದೆ.
![]() |
![]() |
![]() |
![]() |
![]() |
[ays_poll id=3]