This is the title of the web page
This is the title of the web page
Crime News

ಮೊಬೈಲ್ ನಲ್ಲಿ ಮಾತನಾಡುತ್ತಾ ರಸ್ತೆ ದಾಟುತ್ತಿದ್ದಾಗ ಭೀಕರ ಅಪಘಾತ : ಸಾವು


K2 ಕ್ರೈಂ ನ್ಯೂಸ್ : ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚುತ್ತಿವೆ ಅದಕ್ಕೆ ಮುಖ್ಯ ಕಾರಣ ಎಂದರೆ ಮೊಬೈಲ್ ಗಳು.ವಾಹನ ಚಲಾಯಿಸುವಾಗ, ರಸ್ತೆ ದಾಟುವಾಗ ಎಚ್ಚರ ವಹಿಸಿದಷ್ಟೂ ಕಡಿಮೆಯೇ. ಡ್ರೈವಿಂಗ್ ಮಾಡುವಾಗ, ರಸ್ತೆ ದಾಟುವಾಗ ಮೊಬೈಲ್ ಬಳಸಬಾರದು ಎಂದು ಗೊತ್ತಿದ್ದರೂ ಅದೆಷ್ಟೋ ಬಾರಿ ಇಂತಹ ತಪ್ಪು ಮಾಡಿ ದುರಂತಗಳನ್ನು ಮೈಮೇಲೆ ಎಳೆದುಕೊಳ್ಳುತ್ತೇವೆ.

ಅದೇ ಮೊಬೈಲ್ ಇದೀಗ ಮತ್ತೊಂದು ಅಪಘಾತಕ್ಕೆ ಕಾರಣವಾಗಿದೆ. ಬೈಕ್ ಸವಾರರಿಬ್ಬರು ಮೊಬೈಲ್ ನಲ್ಲಿ ಮಾತನಾಡುತ್ತಾ ರಸ್ತೆ ದಾಟಲು ಮುಂದಾಗಿದ್ದಾರೆ ಈ ವೇಳೆ ವಾಹನ ಬರುತ್ತಿರುವುದನ್ನು ಗಮನಿಸಿ ಬೈಕ್ ನಿಲ್ಲಿಸಿದ್ದಾರೆ.

ಇದೇ ವೇಳೆ ಮೊಬೈಲ್ ನಲ್ಲಿ ಮಾತನಾಡುತ್ತಾ ಹಿಂದಿನಿಂದ ಬಂದ ಮತ್ತೋರ್ವ ಬೈಕ್ ಸವಾರ ವಾಹನ ಬರುವುದನ್ನೂ ಗಮನಿಸದೇ ಏಕಾಏಕಿ ರಸ್ತೆ ದಾಟಲು ಮುಂದಾಗಿದ್ದಾನೆ. ಕ್ಷಣಾರ್ಧದಲ್ಲಿ ವೇಗವಾಗಿ ಬಂದ ಗೂಡ್ಸ್ ಲಾರಿಯೊಂದು ಬೈಕ್ ಸವಾರನ ಮೇಲೆಯೇ ಹರಿದು ಹೋಗಿದೆ. ನೋಡ ನೋಡುತ್ತಿದ್ದಂತೆಯೇ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಮೈ ನಡುಗಿಸುವಂತಿದೆ.


[ays_poll id=3]