This is the title of the web page
This is the title of the web page
State News

ಹತ್ತಿ ಬೆಳೆಗೆ ಕೀಟನಾಶಕ ಸಿಂಪಡಿಸುವ ವೇಳೆ ರೈತರು ತೀವ್ರ ಅಸ್ವಸ್ಥ


K2 ನ್ಯೂಸ್ ಡೆಸ್ಕ್ : ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳದೇ ಹತ್ತಿಗೆ ಕೀಟನಾಶಕ ಸಿಂಪಡಿಸೋ ವೇಳೆ ನಾಲ್ವರು ರೈತರು ತೀವ್ರ ಅಸ್ವಸ್ಥರಾಗಿ ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಘಟನೆ ಆರ್‌ಬಿ ನಗರ ತಾಂಡಾದಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆರ್‌ಬಿ ನಗರ ತಾಂಡಾದಲ್ಲಿ ನಡೆದಿದ್ದು. ಒಂದೇ ಕುಟುಂಬದ ರೈತರಾದ ಸುನೀಲ್ ಜಾಧವ್, ಅನೀಲ್ ಜಾಧವ್, ಕುಮಾರ್ ಪಾಪಣ್ಣ ಮತ್ತು ಖೇಮು ರಾಠೋಡ್ ಸೇರಿದಂತೆ ನಾಲ್ವರು ರೈತರು ಜಮೀನಿನಲ್ಲಿ ಹತ್ತಿ ಬೆಳೆಗೆ ಮೋನೊಕ್ರೋವಿನ್ ಕಂಪನಿಯ ಕೀಟನಾಶಕ ಸಿಂಪಡಿಸುತ್ತಿದ್ದರು.

ಈ ವೇಳೆ ಹತ್ತಿ ಬೆಳೆಗೆ ಕೀಟನಾಶಕ ಸಿಂಪಡಿಸುವ ವೇಳೆ ಗಾಳಿ ಮೂಲಕ ಕೀಟನಾಶಕ ಗಾಳಿ ಮೂಲಕ ದೇಹದ ತುಂಬೆಲ್ಲ ಹೋಗಿದೆ. ರೈತರು ವಾಂತಿ ಬೇಧಿಯಿಂದ ಒದ್ದಾಡುತ್ತಾ ನಾಲ್ವರು ರೈತರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಗಾಬರಿಗೊಂಡ ಕುಟುಂಬಸ್ಥರು ಆಂಬುಲೆನ್ಸ್ ಮೂಲಕ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಮೊದಲೆ ಬೆಳೆಯಿಲ್ಲದೇ ಆರ್ಥಿಕ ಸಂಕಷ್ಟದಲ್ಲಿರೋ ಈ ಕುಟುಂಬಕ್ಕೆ ಇದೀಗ ಆಸ್ಪತ್ರೆ ಚಿಕಿತ್ಸೆ ವೆಚ್ಚ ಭರಿಸೋಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಯಾವುದೇ ಬೆಳೆಗೆ ರೈತರು ಕೀಟನಾಶಕ ಸಿಂಪಡಿಸುವ ವೇಳೆ ದೇಹದ ಪ್ರತಿಯೊಂದು ಭಾಗವನ್ನ ಸಂಪೂರ್ಣವಾಗಿ ಮುಚ್ಚಿಕೊಂಡು ಕೀಟನಾಶಕ ಸಿಂಪಡಿಸಬೇಕು. ಅತ್ಯಂತ ವಿಷಕಾರಿ ಅಂಶವುಳ್ಳ ಮೋನೋಕ್ರೋವಿನ್ ಕೀಟನಾಶಕ ದೇಹದ ತುಂಬೆಲ್ಲ ಹೋಗಿದ್ದು, ನಾಲ್ವರು ರೈತರು ತೀವ್ರ ಅಸ್ವಸ್ಥಗೊಂಡು ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಧ್ಯ ರೈತರ ಆರೋಗ್ಯದಲ್ಲಿ ಯಾವುದೇ ರೀತಿಯ ಚೇತರಿಕೆ ಕಂಡು ಬಂದಿಲ್ಲ. ಇನ್ನೆರಡು ದಿನ ಚಿಕಿತ್ಸೆ ಬಳಿಕ ರೈತರು ಆರೋಗ್ಯ ಸ್ಥಿತಿಗತಿ ಬಗ್ಗೆ ವರದಿ ತಿಳಿಯಲಿದೆ ಅಂತಾರೆ ವೈದ್ಯರು. ಅದೆನೇ ಇರಲಿ ಬೆಳೆಗಳಿಗೆ ಕೀಟನಾಶಕ ಸಿಂಪಡಿಸುವ ವೇಳೆ ರೈತರು ಕಡ್ಡಾಯವಾಗಿ ಸುರಕ್ಷಿತ ಕ್ರಮಗಳನ್ನ ಕೈಗೊಳ್ಳಬೇಕು.‌ ಆದರೆ ಇಲ್ಲಿ ಮಾತ್ರ ರೈತರು ಸುರಕ್ಷಿತ ಕ್ರಮಗಳನ್ನ ಕೈಗೊಳ್ಳದೇ ಇರೊದು ದುರಂತಕ್ಕೆ ಕಾರಣವಾಗಿದೆ..


[ays_poll id=3]