
ರಾಯಚೂರು: ಜಿಲ್ಲೆಯಲ್ಲಿ ಹಣದ ಬೇಡಿಕೆಯಿಟ್ಟು ವೈದ್ಯನ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣ ಬಳಿಕ ಚಿನ್ನದ ವ್ಯಾಪಾರಿಗೆ ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ನಡೆದಿದೆ. ನಗರದ ಚಿನ್ನದ ಅಂಗಡಿ ಮಾಲೀಕ ವಿ ಸುರೇಶ್ ಗೆ ಸಿಬಿಐ ಆಫೀಸರ್ ಹೆಸರಲ್ಲಿ ಕರೆ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾರೆ.
ಒಂದು ಲಕ್ಷ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದ ಕಿರಾತಕರು ಖಾಸಗಿ ವಿಡಿಯೋ ವೈರಲ್ ಮಾಡೋದಾಗಿ ಕರೆಮಾಡಿ ಬೆದರಿಕೆ ಹಾಕಿದ್ದಾರೆ. ಮಾಜಿ ಸಿಬಿಐ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ಹೆಸರಲ್ಲಿ ವಂಚನೆಗೆ ಯತ್ನಿಸಲಾಗಿದೆ. ಹಿಂದಿ ಭಾಷೆಯಲ್ಲಿ ಮಾತನಾಡಿ ಬೆದರಿಕೆ ಹಾಕಿದ್ದ ಸೈಬರ್ ಕಿರಾತಕರು ಸುಬೋದ್ ಕುಮಾರ್ ಐಡಿ ಕಾರ್ಡ್ ಹಾಗೂ ಪೋಟೋಗಳನ್ನ ಸಹ ದುರ್ಬಳಕೆ ಮಾಡಿಕೊಂಡು ಹೆದರಿಸಿದ್ದಾರೆ. ಆದ್ರೆ ಬೆದರಿಕೆ ಕರೆಗೆ ಹೆದರದ ಚಿನ್ನದ ವ್ಯಾಪಾರಿ ಪೊಲೀಸರ ಮೊರೆ ಹೋಗಿದ್ದಾನೆ.ರಾಯಚೂರು ಸೈಬರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರಿಗೆ ಚಿನ್ನದ ವ್ಯಾಪಾರಿ ಸುರೇಶ್ ದೂರು ನೀಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]