ನಿಮ್ಮ ಮತದಾನದ ಸಮಯ ಕಾಯ್ದಿರಿಸಿ..!
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್ : ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಚುನಾವಣ ವಿಭಾಗ ನೂತನ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸುತ್ತಿದೆ. ಸಿನೆಮಾ, ರೈಲ್ವೇ ಟಿಕೆಟ್‌ಗಳನ್ನು ಮುಂಚಿತವಾಗಿಯೇ ಕಾಯ್ದಿರಿಸುವಂತೆ ಈಗ ನೀವು ಮತದಾನ ಮಾಡುವ ಸಮಯವನ್ನೂ ಮೊದಲೇ ನಿಗದಿ ಮಾಡಿಕೊಳ್ಳಬಹುದು..!
ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿದ್ದು, ಆಯೋಗ ಈಗಿನಿಂದಲೇ ಸಿದ್ಧತೆ ನಡೆಸಿದೆ. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಾಗುತ್ತಿದ್ದು , ಇದು ಯಶಸ್ವಿಯಾದರೆ ಮುಂದಿನ ಹಂತಗಳಲ್ಲಿ ರಾಜ್ಯದೆಲ್ಲೆಡೆ ವಿಸ್ತರಿಸುವ ಆಲೋಚನೆ ಆಯೋಗಕ್ಕಿದೆ. ಮತದಾನ ಮಾಡಲು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡುವ ಬದಲು, ಯಾವ ಸಮಯದಲ್ಲಿ ಮತದಾನ ಮಾಡಲು ಬರುತ್ತೇವೆ ಎಂಬುದನ್ನು ತಿಳಿಸಿ ಆ ಸಮಯದಲ್ಲಿ ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಹೋಗಿ ಮತದಾನ ಮಾಡಲು ಅವಕಾಶವಿರುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಕುರಿತಂತೆ ಚುನಾವಣ ಆಯೋಗದೊಂದಿಗೆ ಬಿಬಿಎಂಪಿ ಚುನಾವಣ ವಿಭಾಗ ಚರ್ಚೆ ನಡೆಸಿ, ಸಮಯ ನಿಗದಿಗೆ ಮೊಬೈಲ್ ಆಯಪ್ ಸಿದ್ಧಪಡಿಸುತ್ತಿದೆ.
ಎಸ್‌ಎಂಎಸ್ ಮೂಲಕ ಖಾತ್ರಿ
ಈ ಮೊಬೈಲ್ ಆಯಪ್‌ನಲ್ಲಿ ಚುನಾವಣೆ, ಮತದಾನಕ್ಕೆ ಸಂಬಂಧಿಸಿದ ವಿಷಯಗಳ ಮಾಹಿತಿ ಇರುತ್ತದೆ. ಅದರಲ್ಲಿ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆ ನಮೂದಿಸಿದರೆ, ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು ಎಂಬ ಮಾಹಿತಿ ದೊರೆಯಲಿದೆ. ಜತೆಗೆ ತಾವು ಯಾವ ಸಮಯದಲ್ಲಿ ಮತದಾನ ಮಾಡಲು ಬರುತ್ತೇವೆ ಎಂಬುದನ್ನು ಮತದಾರರು ನಮೂದಿಸಿದರೆ, ಅದನ್ನು ನೋಂದಣಿ ಮಾಡಿಕೊಂಡು, ಅವರ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಖಾತ್ರಿಯ ಸಂದೇಶ ಬರಲಿದೆ. ಜತೆಗೆ ಸಂದೇಶದಲ್ಲಿ ಯುನೀಕ್ ಸಂಖ್ಯೆಯೂ ಇರಲಿದೆ.
![]() |
![]() |
![]() |
![]() |
![]() |